ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ
ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ
ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ
ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ1
ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ
ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ 2
ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ 3
ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ
ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ 4
ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ
ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ 5
ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ
ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ 6
ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ
ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ 7
ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ
ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ 8
ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ
ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ 9
ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ
ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ 10
ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ
ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ 11