ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮ ವಚನ ಕಾಂತಿಯಿಂದಿರುವ | ಚಕ್ರ ಪದುಮ ಗದೆ | ಅದರೊಳಗೆ ಬಿದ್ದಿರುವ ಪರಮಪವಿತ್ರ ತ್ಯುಬುಗಳ ತೆಗೆದು | ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ | ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ | ದಿನವೆ ಪರಮ ಪುಣ್ಯೋದಯ ಪ ಪಾದ | ಸರಸೀರುಹ ಸರಸದಿಂ ಕೊಂಡಾಡಿ | ನೆರಳಿ ಮರಳೀ ಸೌಖ್ಯದಾನಂದ | ಶರಧಿಯೊಳು ಮುಣುಗಿ ಮುಣುಗಿ ಏಳುತ | ಸೌಖ್ಯದಾನಂದ ಭಕ್ತಿಭಾವಗಳಿಂದ ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ | ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ | ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ | ಸರುವದಾ ಹರಿಯನ್ನು ಕಾಣುವರು ಕಂಗಳಲಿ | ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ | ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು | ಪರಿಪಾಲಿಸಬೇಕೆಂದು ಭಕ್ತ ಕೇಳಿದನು 1 ದ್ವಿತೀಯ ವಚನ ಜಲಜನಾಭನÀ ರಥದ ದಡದ ಮೇಲೆ ನಿಲ್ಲಿಸಿ | ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ | ಕಲುಷವರ್ಜಿತನಾದ ಕೃಷ್ಣ | ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು | ನಾ ಪೇಳಿದ ಮಾತು ನಡಿಸಿ | ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ | ಲಲನಾಮಣಿಗೆ ಏನು ಹೇಳುವೆನು | ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು | ಎಂದೆನುತ ತಂದೆ ನಂದಗೋಪನು | ಯೋಚಿಸಿ ಮನದಲಿ ಚಿಂತೆಯಗೊಂಡು | ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ | ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ | ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ | ಕನಕ ರಥದ ಮೇಲೆ ನಿಂತಿದ್ದು ತಾ ಕಂಡು | ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು | ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ | ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ | ಚರಣದ ಮಹಿಮೆಗಳ | ಮರಣದಲಿ ಅಜಮಿಳಗೆ ದಯಮಾಡ ಬೇಕೈ | ಅರ್ಭಕ ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ | ಅಪ್ರಾಕೃತ ಅಕಲಂಕ ಚರಿತ ಅಮರೇಂದ್ರ ವಂದಿತ | ಪಾಲಾ ವಿಜಯನ ರಥವನ್ನು ಸಾರಥಿಯಾಗಿ ದಯಾಸಮುದ್ರ ವಿಜಯವಿಠ್ಠಲನೇ2 ತೃತೀಯ ವಚನ ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ | ಕಳತ್ರ | ಪರಿಪಾಲಿಸಬೇಕೆನ್ನ | ಪಾವನ ಚರಿತ್ರ | ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ | ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ | ಕಂಟಕ ಕಂಸಾದಿಗಳ ಗೆಲಿದು | ಪಾದ | ಸರಸಿಜದೊಳು ಚಿತ್ತವಿರುವಂದದಲಿ | ಪರಮ ದಯಾಕರ ನಿನ್ನ ಮಹಾ ಮಹಿಮೆಗಳ | ಗರ್ವಿಷ್ಠನಾಗಿ ಮಲಗಿದವನಲ್ಲಿ | ಕೇಳ್ವ | ತ್ವರಿತದಲಿ ದಯಮಾಡಿ | ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ | ಇನ ಇಂದಿರೆ ಅರಸ | ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ | ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ | ಕಟಕ ರತ್ನಮಯದುಂ | ಗುರ ವಾಹನ ಚಕ್ರವರ್ತಿಗೆ ತನ್ನ ನಿಜರೂಪವ3 ಚತುರ್ಥ ವಚನ ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ | ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ | ಆನೆಯನು ಆದರದಿ ಕಾಯ್ದ ಶ್ರೀನಿವಾಸ | ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ | ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ | ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ | ಮಣಿ ಲಕುಮಿಗ್ಹೇಳದೆ | ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ | ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ | ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ | ಸಿರಿ ತುಳಸಿ | ಪರಿಮಳ ಸಿರಿಗಂಧ ಉದರದಲಿ ಬೆಳಗುವ | ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ | ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ | ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ | ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ | ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ | ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ | ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ | ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ 4 ಐದನೇ ವಚನ ಕರಿಯಬೇಕೆನ್ನ ಹಿರಿಯರೂ | ಇಡಲಾಗದ ಮನಸು ಸರ್ವದಾ ನಿನ್ನ | ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ | ತುತಿ ಮಾಡುವೆ ನಿನ್ನ | ಮುಚಕುಂದ ವರದ ನಿತ್ಯಾನಂದ ವಿಗ್ರಹ | ಸರಸಿರುಹಾಕ್ಷ ಸಜ್ಜನ ಪರಿಪಾಲಾ | ಪೂಜ್ಯ ಅವಗುಣ ವರ್ಜ ಅಕಳಂತ | ಮಹಾನುಭಾವ ಮಧ್ವೇಶ | ಈ ನುಡಿಯು ಪುಸಿಯಲ್ಲ | ಕರ ಪಿಡಿದು ಕಾಯ್ವರನ ಕಾಣೆ ಚರಣಾವಿಂದವನು ಭಜಿಪ ವೀಣೆ | ಈ ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ | ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು | ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ | ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ | ಅರವಿಂದನಾಭ ನಿನ್ನ ಅಮರನೇ ವೈಕುಂಠ | ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ | ವರುಷಕೆ ಇದುವೆ ಎನಗೆ ಹರುಷ ಆನಂದಮಯ | ಇನ್ನೋರ್ವನಿಲ್ಲ ವಿಜಯವಿಠ್ಠಲನೇ 5
--------------
ವಿಜಯದಾಸ
ದೀನರಿಗೆಲ್ಲಾ ಬಂಧು ಕೇಶವ ತಂದೆ ದೀನರಿಗೆಲ್ಲಾ ಬಂಧು ಪ ದಾನವಾಂತಕÀ ನಿನ್ನ ನೇಮಾನುಯಾಯಿಗೆ ಮಾನವ ಕೊಟ್ಟು ರಕ್ಷಿಪ ಬಂಧು ನೀನೇ ಅ ದೀನ ದ್ರೌಪದಿ ದೇವಿಗೇ ಅಕ್ಷಯವಿತ್ತು ಮಾನವ ಕಾಯ್ದೆ ನೀನೇ ಪ್ರಾಣವು ಹಾರುವಾಗ ಜಮಿಳ ಸ್ಮರಿಸಲು ಯೇನನ ಸಲಹೆ ಮೋಕ್ಷವನಿತ್ತ ಹರಿಯೇ 1 ದೀನ ದೇವಿಕಿ ದೇವಿಯ ಗರ್ಭದಿ ಬಂದು ದೈನ್ಯಳ ಸಲಹಿತಿದೆಯೋ ಹೀನ ವಾಲ್ಮೀಕನು ನಾಮವ ಭಜಿಸಲು ಹೀನನಿಗೊಲಿದು ಬುದ್ಧಿಯನಿತ್ತ ಹರಿಯೇ 2 ಸನ್ನುತ ನಮಿಸುವಂಥ ದಾಸರಿಗೆಲ್ಲ ಸನ್ನುತ ಸ್ಮರಿಸುವಂಥ ನಿತ್ಯ ಭಜಿಪ ದೀನರಿಗೆಲ್ಲ ಚನ್ನಕೇಶವ ಸ್ವಾಮಿ ಪೊರೆವಂಥ ಬಂಧೂ 3
--------------
ಕರ್ಕಿ ಕೇಶವದಾಸ