ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಘುರಾಮ ನೀನೆನ್ನ ಪಾಲಿಸೈ ಜಗನ್ನಾಯಕ ಜಾನಕೀಪತೇ ಪ. ಸಾಗರಶಯನ ಸಾರಸನಯನ ನಾಗವೈರಿಗಮನ ಬಾಗಿ ನಮಿಪೆನಾ 1 ಯಾಜ್ಞಸೇನಿಯಂದು ಯಾಚಿಸಲೈನಿಂದು ಅಕ್ಷಯವಸ್ತ್ರದಿಂ ರಕ್ಷಿಸಿದ ಬಂಧು 2 ವಸುದೆಯೊಳು ಬಂದು ಅಸುರರನ್ನೆ ಕೊಂದು ವಾಸುದೇವನೆಂದು ಪೆಸರನಾಂತೆಯಂದು 3 ಪಾಹಿರಾಮರಾಮ ಪಾಹಿಪೂರ್ಣಕಾಮ ತ್ರಾಹಿ ಸತ್ಯ ಪ್ರೇಮ ತ್ರಾಹಿರಂಗಧಾಮ 4 ಶೇಷಶೈಲನಿಲಯವಾಸ ವಾದಿಗೇಯ ವಾಸುದೇವ ಸದಯ ಶ್ರೀಸತೀಪ್ರಿಯ 5
--------------
ನಂಜನಗೂಡು ತಿರುಮಲಾಂಬಾ