ಕಾವ ದೇವರು ನೀನೆ ಎನ್ನ ಕೈ ಪಿಡಿಯೋ
ದೇವ ಹರಿ ತವಪಾದ ಮರೆಹೊಕ್ಕೆ ಕಾಯೊ ಪ
ತರಳ ಪ್ರಹ್ಲಾದನಂ ಸಂಕಟದಿ ರಕ್ಷಿಸಿದಿ
ಮರೆ ಬಿದ್ದ ಅಸುರನಿಗೆ ಸ್ಥಿರಪಟ್ಟ ಕೊಟ್ಟಿ
ಕಂಟಕ ಭರದಿ ನೆರವಾಗಿ ತರಿದಯ್ಯ
ತರುಣಿಯ ಮೊರೆ ಕೇಳಿ ಅಕ್ಷಯವನಿತ್ತಿ 1
ಶಿಲೆಯರೂಪದಿ ಬಿದ್ದ ಸತಿಯನುದ್ಧರಿಸಿದಿ
ಕುಲಗೆಟ್ಟ ಅಜಮಿಳನ ಅಂತ್ಯದಲಿ ಕಾಯ್ದಿ
ಒಲಿದು ನಭೋರಾಜನಂ ಶಾಪದಿಂದುಳಿಸಿದಿ
ಅಳಿಯದ ಪದವಿ ನೀಡಿ ಧ್ರುವರಾಜನ್ಪೊರೆದಿ 2
ಭಕ್ತವತ್ಸಲನೆಂಬ ಬಿರುದಗಳ ಪೊತ್ತಿರುವಿ
ಭಕ್ತನಿಗೆ ಬರುವ ನಿಖಿಲಾಪತ್ತುಗಳನು
ಕತ್ತರಿಸಿ ಹಿತವಾದಭಕ್ತಿಯನು ಕರುಣಿಸಿ
ನಿತ್ಯನಿರ್ಮಲಸುಖವ ನೀಡು ಶ್ರೀರಾಮ 3