ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ