ಪ್ರಥಮಾಕ್ಷರನೆ ದೇವಾ ಮಹಾನುಭಾವಾ ಪ
ಸದ್ಗತಿಗೆ ಕಾರಣ ಸಿದ್ಧ ಮೆನ್ನುತ
ಪಥವ ಗೈದು ಪರಂಪರವ ತಾ
ಸ್ವತಹನಾಗಿಯು ಪ್ರಜ್ವಲಿಸುತಿಹ 1
ವೇದವೇದಾಂತತಿ ಪರತರ
ಪಾದಸೇವೆಯ ಕೊಟ್ಟು ನನಗೆ ನೀ
ಬೋಧಿಸೆಂದೆಂತೆನು ಪ್ರಣವಾ 2
ಶಿಕ್ಷೆ ರಕ್ಷೆಗೆ ಅಕ್ಷಗೊಳಿಸಿದ
ಮೋಕ್ಷದಾಯಕನೆಂದು ಭಜಿಸಲು
ಸೂಕ್ಷ್ಮದ್ವಾರದಿ ಹೊಳೆವ ನಿಜಪದ 3
ವೃಂದ ಮಧ್ಯದೊಳೆಸೆವ ಶುಭಕರ
ಚಂದಪಾದವ ತೋರಿ ಕರುಣಿಸೊ
ಚಂದ್ರಧರ ಚಾಂಪೇಯವದನನೆ 4
ಅಂಗವಿಲ್ಲದೆ ಪೆಸುಸರುತಾಳಿ ನೀ
ಲಿಂಗ ಮುಖವಾಗಿರುವ ಸೊಬಗನೂ
ಕಲುಷ ಪ
ತಂಗ ವೋಂಕಾರೇಶ್ವರನೇ ವೋಂ 5
ಗುಡಿಯೊಳಿಹ ನಿಷ್ಕಲ ನಿರಂಜನ
ಅಡಿಗಳಿಗಡಿಯಾದೆನೀಗಾ 6