ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪದುಮನಾಭನ ಚರಿತೆಯು ಪರಮಾದ್ಭುತವು ಪ ಯದುಕುಲ ಲೋಲನ ವಿಧ ವಿಧ ಲೀಲೆಯೊ ಪದೇ ಪದೇ ನೆನೆಯಲು ಪರಮಹರುಷ ಮನಕೆ ಅ.ಪ. ದೇವತೆಗಳ ಮೊರೆ ಲಾಲಿಸಿ ಭುವಿಯೊಳು ದೇವಕಿ ಸುತನಾಗಿ ಜನಿಸಿದನು ಗೋವಳರೊಡಗೂಡಿ ಗೋವ್ಗಳ ಕಾಯ್ದ ಬೃಂ ದಾವನ ಲೋಲನು ಶ್ರೀವೇಣುಗೋಪಾಲ 1 ಕಾಮಜನಕ ಸರ್ವಕಾಮಿತದಾಯಕ ಕಾಮಿನಿಯರ ಕೂಡೆ ಕ್ರೀಡಿಸಿದನನಘ ಆ ಮಹಾಭಕ್ತ ಅಕ್ರೂರನಿಗೊಲಿದನು ತಾಮಸ ಕಂಸನ ಧ್ವಂಸಗೈದನು ದೇವ 2 ಕರಿಗಿರೀಶ ಮುಚುಕುಂದ ವರಪ್ರದ ಸರಸಿಜಾಕ್ಷ ಶ್ರೀರುಕ್ಮಿಣಿರಮಣ ಸುರರಿಪು ನರಕಾಸುರ ಸಂಹಾರಕ ಸುರಮಾತೆಗೆ ಕುಂಡಲಿಗಳನಿತ್ತನು 3
--------------
ವರಾವಾಣಿರಾಮರಾಯದಾಸರು