ಸನುಮತವೆಂಬುದಿಲ್ಲ ಅನುನಯವಿಲ್ಲ ಪ
ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ
ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ
ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ
ಪಂಚದ ಸುಖದೊಳು ಪಂಚೇಂದ್ರಿಯಗಳಾ
ಹಂಚುತೆ ಮನವನು ಚಂಚಲಗೈದುವಲ್ಲ
ಅಂಚೆಯಿಲ್ಲದ ಸರಸಿಯಂತಾಗಿಯೆನ್ನ 1
ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ
ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ
ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು
ಹರಿಗೆರಗುವ ಶಿರವು ಗರುವವ ಬಯಸಿದೆ 2
ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು
ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ
ಕರ್ಣ ಠಕ್ಕು ಕೌಳಿಯ ಮೆದುಳು
ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ 3
ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ
ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ
ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ
ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ 4