ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
--------------
ಪುರಂದರದಾಸರು