ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ ಪ್ರೇಮವ ಬಣ್ಣಿಸಲಸದಳ ಕಂಡ್ಯ ಪ ಜಕ್ಕ ಜವ್ವನ ಪೋಗಬಾರದೆಂದೆನುತಲಿ ಮಕ್ಕಳ ನಿನ್ನೊಳು ಜನಿಸನು ಕಂಡ್ಯ ಅಕ್ಕರೆಯನು ಶ್ರೀದೇವಿ ನೀ ಕಂಡ್ಯ 1 ಉರದೊಳು ತೊಡೆಯೊಳು ಕೊಳಲೊಳಾಭರಣದೊಳು ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ ನೀರೊಳಕ್ರೂರಗೆ ಒಲಿಯುವಾಗಲು, ಮಹಾ ನೀರೊಳು ಪ್ರಳಯದಿ ನಿನ್ನನು ಬಿಡನು 2 ರಾಜಾಧೀರಾಜರು ಬಹುದಾರರೆಂಬರು ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ ರಾಜೇಶಹಯಮುಖನಂಥ ಪ್ರೇಮಿಗಳುಂಟೆ ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ 3
--------------
ವಿಶ್ವೇಂದ್ರತೀರ್ಥ