ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬಾಳಿದರೇನು ಆರು ಬದುಕಿದರೇನುನಾರಾಯಣನ ಸ್ಮರಣೆ ನಮಗಿಲ್ಲದನಕ ಪ ಉಣ್ಣ ಬರದವರಲ್ಲಿ ಊರೂಟವಾದರೇನುಹಣ್ಣುಬಿಡದ ಮರಗಳು ಹಾಳಾದರೇನುಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನುಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು 1 ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನುಹೊಕ್ಕು ನಡೆಯದ ನಂಟತನದೊಳೇನುರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನುಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು 2 ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನುಬಲ್ಪಂಥವಿಲ್ಲದವನ ಬಾಳ್ವೆಯೇನುಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನಸ್ವಲ್ಪವೂ ನೆನೆಯದ ನರನಿದ್ದರೇನು 3
--------------
ಕನಕದಾಸ
ನೀನೆ ಗುರುವಾಗೆನಗೆ ಕೋನೇರಿವಾಸ ಙÁ್ಞನವಿಲ್ಲದ ಮನುಜ ತಾನಿದ್ದು ಫಲವೇನು ಪ ನಾಳವಿಲ್ಲದ ಘಂಟೆ ಭಾರವಾಗಿದ್ದರೇನು ತೋಳ ಬಲಹಿಲ್ಲದವ ದೊರೆಯಾದರೇನು ಹಾಳು ಭೂಮಿಯು ತನ್ನ ಮೂಲವಾದರೆಯೇನು ಬಾಳಲೀಸದ ಮನೆಯ ಬಲವಂತವೇನು 1 ತಿದ್ದಬಾರದ ತೇಜಿ ಉದ್ದವಾಗಿದ್ದರೇನು ಮೂರ್ತಿ ಮುದ್ದಾದರೇನು ಕದ್ದ ಕಳ್ಳನ ಮಾತು ಬದ್ಧವಾದರೆಯೇನು ಮದ್ದನರಿಯದೆ ಧಾತು ತಿಳಿದಿದ್ದರೇನು 2 ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು ಕಡ್ಡಾಯದಂಗಡಿಯಲಿದ್ದು ಫಲವೇನು3 ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು ಅಕ್ಕರಿಲ್ಲದ ತವರು ಇದ್ದು ಫಲವೇನು ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು 4 ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ 5 ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು ಕಡುಹುಳ್ಳ ದೊರೆಗಳನು ಹೊರವುತಿಹುದು ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು ಒಡನೆ ಹೇಳಿದ ನುಡಿಯ ತಾ ನುಡಿವುದು 6 ಬಂಟ ಬಿಡದೆ ಸೇವೆಯ ಮಾಳ್ಪ ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು ಒಡೆಯನನು ಭಜಿಸಲಿಕೆ ಮನವಿಲ್ಲವು 7 ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು ಒರೆದು ಮಾರ್ಗವ ತೋರು ಉರಗಗಿರಿವಾಸ ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ 8
--------------
ವರಹತಿಮ್ಮಪ್ಪ
ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ ಅಮಿತ ಕಮಲ ರವಿತನಾಗದ ಮನುಜನೇಕೆ1 ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2 ದಾನವಿಲ್ಲದ ಧನವಿದೇತಕೆ | ರಂಗನಾಥ ಜ್ಞಾನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3 ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4 ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5
--------------
ಅನ್ಯದಾಸರು