ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನೋ ನಿನ್ನ ಚರಣ ಕಮಲವ ಸೊಂಡಿಲಿಂದಿಹ ಗಣಪತಿ ಕೊಡು ವರವ ಪ ಮಣಿ ಕುಂಡಲ ಭೂಷಾ ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ ಮಂಡಲದೊಳು ನಿನ್ನ ಕೀರ್ತಿ ವಿಶೇಷ 1 ಚಂದನಾಗರು ಧೂಪ ದೀಪಾವಳಿಯಿಂದಾ ನಂದದಿಂದಲಿ ಪೂಜಿಪೆ ಭಕ್ತಯಿಂದ ನಂದಿವಾಹನನಿಗೆ ಮೋಹದ ಕಂದ ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ 2 ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ 3
--------------
ಕವಿ ಪರಮದೇವದಾಸರು
ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊe್ಞÁನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ಬಂದ ಶ್ರೀಕೃಷ್ಣ ನಲಿಯುತ್ತ ನಸುನಗೆ-ಯಿಂದ ಬೇಗ ಯಶೋದೆಯಿದ್ದೆ[ಡೆಗೆ] ಪ. ಉದಯದೊಳೆದ್ದು ಮೊಸರ ಕಡೆವಾಗ ತನ್ನಅದುಭುತ ಬಾಲಲೀಲೆಗಳ ಪಾಡೆಮುದದಿ ನಯನದಿ ಜಲ ತುಳುಕಾಡುತಿರೆ ಕಂಡುಮದನನಯ್ಯನು ನಚ್ಚಿ ಬೆಣ್ಣೆಯ ಬೇಡುತ್ತ1 ಮಕ್ಕಳುಗಳ ಕೂಡಿ ಮನೆಮನೆಯೊಳಗಾಡಿಮಿಕ್ಕುಮೀರಿದ ರಕ್ಕಸರನೀಡ್ಯಾಡಿಅಕ್ಕರಿಂದಲಿ ತಾಯ ಮುಖವನೀಕ್ಷಿಸುತಲಿಗಕ್ಕನೆ ಸೆರಗ ಪಿಡಿದು ಮೊಲೆಯ ಕೊಡೆನ್ನುತ2 ಕುರುಳಕೂದಲು ಅರಳೆಲೆ ಮಾಗಾಯಿಕೊರಳಪದಕ ಹಾರ ಎಸೆಯುತಿರೆಚರಣದಂದುಗೆ ಗೆಜ್ಜೆ ಘಲುಘಲುಕೆನ್ನುತಲಿಸಿರಿಯರಸ ಹಯವದನನೆನಿಪ ಮೋಹನಾಂಗ 3
--------------
ವಾದಿರಾಜ
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು