ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಿನ್ನೇಶದೂತರು ಎಳಿಯಾರೆ ಪ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ 1 ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ2 ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು | ಆಯಿತು ಮಗುವೆಂದು ನುಡಿವರು | ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು 3 ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ | ಅಕ್ಕರದಿಂದಲಿ ನೋಡಿ ಕೊಂಡಾಡಿ | ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ | ರಕ್ಕಸಿಯ ತಂದು ನಿನಗೆ ಜತಿ ಮಾಡಿ 4 ನೆಲೆ ಇಲ್ಲದ ಮಮತೆಯೊಳು | ಮುಳುಗಿ | ತಲೆಕೆಳಗಾಗಿ ನಡೆದು ಹಗಳಿರುಳು | ಕುಲನಾಶಕನೆಂಬೊದು ಬಾಳು | ಬಿಡು | ತಿಳಿಯ ಪೇಳುವೆನು ಎತಾರ್ಥವ ಕೇಳು5 ದುರ್ವಾಸನೆ ನಾರುವ ಬೀಡು | ಇದು | ಸ್ಥಿರವಲ್ಲ ಎಂದಿಗು ಹಂಬಲ ಬಿಡು | ಹರಿದಾಸರ ಸಂಗ ಮಾಡು | ಇನ್ನು | ಹರಿನಾಮಗಳ ಕೊಂಡಾಡು 6 ಆವಾವ ಜನ್ಮದಲಿ ನೀನು | ಒಮ್ಮೆ | ದೇವ ಎಂದೆನಲಿಕ್ಕೆ ನಾಲಿಗಿತ್ತೇನು | ಈ ಉತ್ತಮವಾದ ಈ ತನು | ಬಂತು | ಕೋವಿದನಾಗಿ ಶ್ರೀ ಹರಿಯನ್ನು ಕಾಣು7 ಆ ಮರ ಈ ಮರ ಎನಲಾಗಿ | ಅವನ | ತಾಮಸದ ಜ್ಞಾನ ಪರಿಹಾರವಾಗಿ | ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ | ಭೂಮಿಯೊಳಗೆ ಬಾಳಿದನು ಚನ್ನಾಗಿ 8 ಸಿರಿ | ರಂಗ ಯೆನಲಾಗಿ ಕಾಯ್ದ ಶ್ರೀಪತಿ | ವಿಜಯವಿಠ್ಠಲ ನಂಬು 9
--------------
ವಿಜಯದಾಸ
ಗೋಕುಲ ಬಿಟ್ಹ್ಯಾಂಗಿಲ್ಲಿಗೆ ಬಂದೆ ಶಿರಿಕೃಷ್ಣ ರಂಗಾ ವ್ಯಾಕುಲದಲಿ ನೀ ಸಾಗರ ತ್ಯಜಿಸಿ ಜೋಕೆಯಿಂದಲಿ ನಿಜಧಾಮಕೆ ಬಂದೆ ಪ ಬನ್ನವ ಪಡುತಿಹ ಭಕುತನ ನೋಡಿ ಚಿಂತೆಯ ಮಾಡಿ ಎನ್ನಂತರಂಗದ ಬಾಧೆಗಳು ಕಾಡೆ ಬಳಲುವುದಾ ನೋಡೆ ಮನ್ನಿಸಿ ಶರಣನ ಬಾಧಿಸುವ ಪೀಡೆ ಪರಿಹಾರ ಮಾಡೆ ಪನ್ನಗ ಶಯನ ಶ್ರೀಹರಿಯೇ ಓಡೋಡಿ ಬಂದೆ 1 ಪೊಕ್ಕಿಹೆನು ಸಂಸಾರಾರ್ಣವದೊಳಗೆ ಬಹು ದುಃಖದ ಅಲೆಗೆ ಲೆಕ್ಕವಿಲ್ಲದಾ ಜಂತುಗಳದರೊಳಗೆ ಇಂಬಿಲ್ಲಾ ಅಲ್ಲಿಡಿಂಬಕೆ ಸಿಕ್ಕಿ ಬಳಲುವಂಥ ಭಕುತನ ನೋಡಿ ಬಿಡುಗಡೆ ಮಾಡೆ ಅಕ್ಕರದಿಂದಲಿ ಭರದಿ ಕಾಪಾಡಲು ಬಂದೆ 2 ಶರಣರ ಪೊರೆಯುವುದೇ ನಿನ ಗುಟ್ಟು ಬಣ್ಣಿಸಲಿನ್ನೆಷ್ಟು ಕರುಣಿಸಿ ಬರುವಿ ಶಿರಿಯನು ಬಿಟ್ಟು ಭಕುತರೆ ನಿನಕಟ್ಟು ನಿರುಪಮ ನಿನ್ನಯ ದಯಕೇನೆನ್ನಲಿ ಶರಣರ ಪೊರೆಯುವಿ ನರಸಿಂºವಿoಲಾ ಬಂದೆ 3
--------------
ನರಸಿಂಹವಿಠಲರು
ಜಯದೇವ ಜಯದೇವ ಜಯಗೋಪಾಲಕೃಷ್ಣಾ | ಜಯ ಜಯಯೋಗೀ ಮಾನಸ ಮೋಹನ ಘನಕರುಣಾ ಪ ದೇವಕಿವಸುದೇವರ ಭಾವನೆ ಪೂರಿಸಲಿ | ಶ್ರಾವಣ ಕೃಷ್ಣಪಕ್ಷದ ಅಷ್ಟಮಿರೋಹಿಣಿಲಿ || ತೀವಿದ ಚಂದ್ರೋದಯ ರಾತ್ರಿಯ ಕಾಲದಲಿ | ಭುವನದಿ ಅವತಾರವ ಮಾಡಿದೆನೀ ವೇಗದಲಿ 1 ಸೊಕ್ಕಿದ ಕಂಸನ ಕೊಂದು ದುಷ್ಕ್ರತನಾಶನವಾ | ಮುಖ್ಯಮಾಡು ಕಾರಣ ಧರ್ಮ ಸ್ಥಾಪನವಾ || ಸಖ್ಯದಿ ಕಟ್ಟಲು ಉಗ್ರಶೇನಗೆ ಪಟ್ಟವಾ | ಅಕ್ಕರದಿಂದಲಿ ಬೆಳೆದೆ ಗೋಕುಲದಲಿ ದೇವಾ 2 ಕುರುಕುಲಾನ್ವಯ ಜೀವನರೆಲ್ಲರ ಸೆಬಡಿದೆ | ಚರಣವನಂಬಿದ ಪಾಂಡವರನು ಸ್ಥಾಪನಗೈದೆ | ಪರಪರಿಯಿಂದಲಿ ಭಜಿಸುವ ಭಕ್ತಾವಳಿ ಪೊರೆದೇ | ಗುರುವರಮಹೀಪತಿ ಸುತ ಪ್ರಭುಸಲಹೆನ್ನನು ಬಿಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಸ್ವಾಮಿ ಪ. ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ 1 ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ 2 ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ 3
--------------
ವಾದಿರಾಜ