ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಳಿಯ ಬೇಡಿರಿ ಎನ್ನಪ್ಪಗಳಿರೆ ಕೇಳಿ ಪ. ಎಳದಂಗೆ ನುಡಿದುದನು ಹಳಿವಿರೇ ಪೇಳೀ ಅ.ಪ. ಶೃತಿ ಸ್ಮøತಿ ಪುರಾಣ ಇತಿಹಾಸ ಶಾಸ್ತ್ರಗಳ ಗತಿಮಿತಿ ತತ್ವಮದೊಂದನರಿಯೆ ಅತಿಶಯಿತ ಪಾಂಡಿತ್ಯ ಪ್ರಭೆಯಿಂ ರಾಜಿಪರಲ್ಲಿ ಕ್ಷಿತಿನಾಥನಾಡಿಸಿದ ಪರಿಯಿದೆಂದೆನುವೆ ವಿನಯದಲಿ 1 ಅಪ್ಪಗಳಿರೆ ನಿಮ್ಮಡಿಯೊಳೊಪ್ಪಿಸಿರುವೀ ಕೃತಿಯ ತಪ್ಪೊಪ್ಪುಗಳ ಸಲೆ ನೋಡಿ ನಲವಿಂ ತಪ್ಪುಳ್ಳೊಡದನೊಪ್ಪದಿಂಸಾವರಿಸಿ ಮುಂ ದೊಪ್ಪುತಿಹ ಜಸವನಪ್ಪುಗೊಳ್ಳಿರಿ ದಿಟದಿಂ2 ಕಕ್ಕುಲತೆಯುಳ್ಳೆನ್ನ ಅಕ್ಕತಂಗಿಯರಿಗಿದನು ಅಕ್ಕರತೆಯಿಂದೊಪ್ಪಿಸಿಹೆನೆಂದರಿಯಿರಿನ್ನು ಕಕ್ಕಸದಿ ನೋಡದಿರಿ ಧಿಕ್ಕರಿಸಿ ನುಡಿಯದಿರಿ ಚಿಕ್ಕಮಕ್ಕಳ ನೋಡಿ ತಕ್ಕೈಸಿ ನುಡಿಗಲಿಸಿರಿ ಸುಕೃತಕೆ ಸಾಕ್ಷಿಯೆಂಬೆ ಸಾರಿ] 3
--------------
ನಂಜನಗೂಡು ತಿರುಮಲಾಂಬಾ