ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು