ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ಪ. ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು ವಾರಿಜದಳಲೋಚನಗಾರತಿಯನೆತ್ತಿದರೆ 1 ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ 2 ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ 3 ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ 4 ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ 5 ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ 6 ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ 7 ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ 8 ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ ಭಾಸುರಸುರಮಯಪೀಠಗಾರತಿಯನೆತ್ತಿದರೆ9 ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ ಕೇಶವ ನಾರಾಯಣಗಾರತಿಯನೆತ್ತಿದರೆ 10 ನಿಖಿಳ ಖಳರ ಸೀಳ್ದನಿಗೆ ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ 11 ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ12 ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ ಪಂಕಜಮುಖಿಯರು ಮಂಗಳಾರತಿಯೆತ್ತಿದರೆ 13
--------------
ವಾದಿರಾಜ
ಶರಣು ಶ್ರೀ ಗುರುರಾಯ | ಶರಣು ಬುಧ ಜನಪ್ರೀಯ | ಶರಣು ಪಾವನ | ಶರಣು ನಮ್ಮಯ್ಯ ಪ ಧರಣಿಯೊಳಗ ವಿದ್ಯ ದಾವರಣವಿಕ್ಷೇಪದಿ ಹರಿಯ ಭವ ಜನುಮ ಮರಣ ಬಲಿಗೆ ಸಿಲುಕಿ | ಹರಣ ಹಾಕುತಿದೆ ನೋಡೀ ಕರುಣದಿಂದ ಭಯ ನೀಡಿ | ತರಣೋಪಾಯ ದೋರಿ ದೀನೋದ್ಧರಣ ಮಾಡಿ ಹೊರೆದೇ 1 ನರದ ಹುಳುವ ತಂದು ಮಂದಿರದೊಳಿಟ್ಟು | ತನ್ನಂಗ ತೆರದಿ ಮಾಳ್ಪಾ ಭೃಂಗಿಯ ತೆರದೆ ನಂಬಿದವರಾ | ಕರೆದು ಬೋಧಾಮೃತದ ನುಡಿವೆರದು ಚಿನುಮಯಾನಂದ ಮರದ ಠಾವ ತಪ್ಪಿಸಿ ಎಚ್ಚರದೊಳು ನಿಲಿಸಿದೇ 2 ಮುಕುತಿ ಸಾಧನವಾದಾ ಭಕುತಿ ನವ ವಿಧ ಶಾಸ್ತ್ರ | ಯುಕುತಿ ಪ್ರಾಬಲ್ಯ ವಿರಕ್ತಿಯನಗಿಲ್ಲಾ | ಶಕುತ ಗುರು ಮಹಿಪತಿಯ ಭಕುತ ನೆನಿಸಿದಕಿನ್ನು ಅಕುತೋ ಭಯ ಹೊಂದುವಾ ಶಕುತಿ ನೀಡಯ್ಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಮಂಗಳಂ ಮಂಗಳಂ ಹರಿಸಚ್ಚಿದಾನಂದಗ ಮಂಗಳಂ ಅಚ್ಯುತಾನಂತ ಗೋವಿಂದಗೆ ಮಂಗಳಂ ವಿಧಿಭವಾಮರ ವಂದ್ಯಗೆ ಪ ಆನಂದ ಕೋಶಗ ಅಖಿಳಜನಪೋಷ ದಾನವಿನಾಶಗ ದೇವೇಶಗ ವನಮೂಲಭೂಷಗವರದ ಹೃಷೀಕೇಶಗ ಮುನಿಜನೋಲ್ಲಾಸಗ ಧರಿಣೀಶಗೆ 1 ಮಾಯಾ ವಿಮುಕ್ತಗ ಸಕಲಗುಣಯುಕ್ತಗ ವಿರಹಿತಂಗೆ ಭಕ್ತಾನುರಕ್ತಗ ಚಿಂತ್ಯ ಅವ್ಯಕ್ತಗ ಅಕುತೋಭಯದಾ ತಗ ಜದಧಾತಗೆ 2 ವರಯದುರಾಯಗ ನಂದ ಕುಮಾರಗ ಸುರಸಹಕಾರಗ ಸುಂದರಗ ದುರಿತ ಸಂಹಾರಗ ಅಮಿತಾವತಾರಗ ಗುರುಮಹೀಪತಿ ನಂದ ನೋದ್ಧರಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಳಾದಿ ಧ್ರುವತಾಳ ಹರಿಪದವ ನೆನೆವಂಗೆ ನರಕದ ಭಯವಿಲ್ಲ ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ ಹರಿಪದವ ನೆನೆವಂಗೆ ವಿಷದ ಭಯವಿಲ್ಲ ಹರಿಪದವ ನೆನೆವಂಗೆ ಭವದ ಭಯವಿಲ್ಲ ಹರಿಪದವ ನೆನೆವಂಗೆ ಜನನದ ಭಯವಿಲ್ಲ ಹರಿಪದವ ನೆನೆವಂಗೆ ಮರಣದ ಭಯವಿಲ್ಲ ಬರಿಯ ಮಾತೇ ಅಲ್ಲ ಅಕುತೋಭಯನೆಂದು ವರದ ಹಯವದನನ ಪದಪದುಮವ ನಂಬು 1 ಮಠ್ಯÀತಾಳ ಧ್ರುವನ ನೋಡು ಸುರಲೋಕದಿ ಭುವಿ ವಿಭೀಷಣನ್ನ ನೋಡಿರೊ ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ 2 ತ್ರಿಪುಟತಾಳ ಹತ್ತಾವತಾರದಿ ಭಕ್ತರ ಭಯಗಳ ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು ಮತ್ತೆ ಮೃತ್ಯುಗಳ ಭೀತÀನೆಂಬುವುದ್ಯಾಕೆ ಹೆತ್ತ ತಾಯಿಯಿಂದ ತತ್ವವ ಕೇಳಯ್ಯ ಕರ್ತೃ ಹಯವದನನೆ ಭಕ್ತರ ಭಯಕ್ಕೆ ಕತ್ತಲೆಗಿನನಂತೆ ಹತ್ತು ಎಂಬುದು ನಂಬು3 ಝಂಪೆತಾಳ ಕರಿಯ ಕಾಯ್ದವನ ಪಾದವ ನಂಬು ಉರಿಯ ನುಂಗಿದವನ ಪಾದವ ನಂಬು ಸಿರಿ ಹಯವದನನೆ ಭಕ್ತರ ಭಯ ಸಂ- ಹರಣನೆಂಬುದಕ್ಕಿನ್ನು ಸಂಶಯವಿಲ್ಲ 4 ರೂಪಕÀತಾಳ ದ್ರೌಪದಿಯ ಭಯ ಪರಿಹರಿಸಿದವನಾರೈ ಆ ಪರೀಕ್ಷಿತನ ಭವಭಂಜನನಾರೈ ತಾಪಸರಿಗಸುರರಿಂದ ಬಂದ ಪರಿಪರಿಯ ಆಪತ್ತುಗಳನೆಲ್ಲ ಖಂಡಿಸಿದನಾರೈ ಶ್ರೀಪತಿ ಹಯವದನನೊಬ್ಬನೆ ತನ್ನವರ ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ 5 ಅಟ್ಟತಾಳ ವಿಷನಿಧಿಯನೊಂದು ದಾಟಿ ವ್ಯಸನಗಳನೆಲ್ಲ ಖಂಡಿಸಿ ಬಿಸಜವನಿತೆಯ ಕಂಡು ಬಂದ ಅಸಮ ಹನುಮನ ನೋಡಯ್ಯ ಕುಸುಮವನು ತರಪೋಗಿ ಅಸುರರ ಕುಸುರಿದರಿದುದ ನೋಡಯ್ಯ ಬಿಸಜಾಕ್ಷ ಹಯವದನ ತನ್ನ ಹೆಸರುಗೊಂಡರೆ ಭಕ್ತರ ವಶÀಕ್ಕಿಪ್ಪುದು ಪಾರ್ಥನ ಯಶವ ಪಸರಿಸಿದ ಅಚ್ಚುತ 6 ಪೂರ್ವಕಾಲದಿ ತೀರದ ಕಥೆಗಳ ನಿ- ವಾರಿಸಿ ಜರಿದುದ ನರರೆಲ್ಲ ಕಾಣರೆ ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ ಈರೇಳು ಲೋಕದೊಳಗೆ ಈ ಹಯವದನನಂತೆ ಶರಣಾಗತಜನರ ಸಲಹುವರುಳ್ಳರೆ 7 ಜತೆ ಸುರಾಸುರಚಕ್ರವರ್ತಿ ಅಸುರಮದಭೇದನ್ನ ಸಿರಿ ಹಯವದನನ್ನ ಚರಣವೆ ಗತಿಯೆನ್ನು
--------------
ವಾದಿರಾಜ
ಸುಳಾದಿಧ್ರುವತಾಳರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1ಮಠ್ಯತಾಳಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2ತ್ರಿಪುಟತಾಳನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3ಅಟ್ಟತಾಳಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4ಆದಿತಾಳಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5ಜತೆಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
--------------
ಪ್ರಸನ್ನವೆಂಕಟದಾಸರು