ಬಂದನೇಳೆ ದೇವಿ ರಂಗ ಮನೆಗೇ|
ಇಂದು ಮುಖಿ ನಿನ್ನ ಮನದಾ ನಂದ ಕೊಡಲು ಪ
ಭಾಗವತ ರೊಡಗೂಡಿ|
ಭಕ್ತಿರಂಗದೊಳಾಡಿ ಸುಖವ ಸೂರ್ಯಾಡಿ 1
ಗರುಡವಾಹನ ಪರಾಕೆಂಬ ಶೃತಿ ಭಟರು|
ಮೂರಾರು ಸಾಲ ಪಂಜಿನ ಬೆಳಗಿನಿಂದ 2
ಸಕಲ ಸುಂದರ ರಾಶಿಯೆ ಎನಿಪ ಮೋಹನರೂಪ|
ಅಕಳಂತಕ ಬ್ರಹ್ಮಾದಿ ಸುರರೊಡೆಯಾ 3
ದುರಿತ ಹರನೆಂಬ|
ಬಿರದ ಜಾಂಗಟೆ ಶಂಖ ಕೌಸಾಳರವದಿ 4
ತನ್ನ ಭೃತ್ಯರ, ಭೃತ ಭೃತ್ಯನ ಕರೆದು|
ಮನ್ನಿಸುವ ಮಹಿಪತಿ ಸುತಪ್ರಾಣ ಪದಕಾ 5