ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಅಸದೃಶಮಹಿಮೆಯನು ಪ ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ | ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1 ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2 ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ ರಾಯರೊಲಿಯಲು ಗುರುವಾಯು ವಲಿವಾ | ವಾಯು ವಲಿದಾ ಮಾತ್ರದಿ | ಕಾಯಜ ಜನಕ ಯಮರಾಯನಂಬಿಸಿ ಬಿಡಿಸಿ ಕಾಯುವನು 3 ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ | ಕಾಯ ಶುದ್ಧಿಯಲಿ ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4 ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ ಇಂದಿರಾಪತಿ ಶಾಮಸುಂದರನ ಕರಪಿಡಿವ 5
--------------
ಶಾಮಸುಂದರ ವಿಠಲ
ಲೋಕನೀತಿ ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ ಇಲ್ಲೆ ಶ್ರೀಹರಿಯಿಲ್ಲವೆ ಪ ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ ತುಂಬಿ ಸೂಸುತಲಿರುವ ಅ.ಪ ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು ಘಾಸಿಗÉೂಳ್ಳುವೆ ಏತಕೋ ವಾಸನೆಯ ನೀಗದವನಾಶೆಪಾಶಗಳಿಂದ ಬೇಸತ್ತು ಚರಿಸಲೇಕೋ ಈಶನಾವಾಸವೀಜಗವೆಲ್ಲವಿಲ್ಲಿಲ್ಲ ವಲ್ಲಿರುವನೆಂಬುದೇಕೋ ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ ಆಸೆಯುದಯಿಸಲಿಲ್ಲವೇಕೋ 1 ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ ಗುಣ ಮಹಿಮನರಿಯ ಬಯಸೋ ಎಣಿಸಲಾಗದನಂತಗುಣನ ಪ್ರಾಣಿ ಸಮೂಹ ಗಣಗಳೊಳು ಕಾಣಬಯಸೋ ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ ಕಣ್ದಣಿಯೆ ಕಾಣುತ ಭಾವಿಸೊ ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ 2 ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ ಫಲವೇನು ವ್ಯರ್ಥಶ್ರಮವೋ ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ ಮಾಡಿದರು ವ್ಯರ್ಥಶ್ರಮವೋ ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ ದಾನವದು ವ್ಯರ್ಥಶ್ರಮವೋ ಅಕಳಂಕಮಹಿಮ ರಘುರಾಮವಿಠ್ಠಲನೆಂದು ನಂಬಿ ನಡೆವುದೆ ಸಾರ್ಥಕವೋ 3
--------------
ರಘುರಾಮವಿಠಲದಾಸರು
ವೆಂಕಟಾಚಲ ನಿವಾಸಾ-ಜಗದೀಶ ಸಂಕಟ ಹರಿಸೋ ಶ್ರೀಶಾ ಪ ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ ಅಕಳಂಕಮಹಿಮ ಖಗಾಂಕ ಚಕ್ರಗದಾ ಶಂಖಶ್ರೀಕರಕಂಜಧರಪಾಣೀ ಅ.ಪ ಲೋಕನಾಥ ಲೋಕಬಂಧು-ದಯಾಸಿಂಧು ಭಕುತರನಿಮಿತ್ತಬಂಧು-ಎಂದೆಂದೂ ಭಕುತರ ಬೆಂಬಲನು ಎಂದೂ-ಇಂತೆಂದೂ ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ ಏಕಮೇವ ನೀ ಕೈಬಿಡದೆ ಕರ್ಮ- ಪಾಕಮಾಡಿಸೋ-ಕಾಲನಾಮಕ1 ಬಂಧಕಗಳ ತಂದೊಡ್ಡೀ-ಭಕುತರ ಮನ ಪರಿ ಧೃಢಮಾಡಿ-ಪರಿಯುನೋಡಿ ಬಂದ ಬಂಧವ ಹರಿಸಿ-ಹೃದ್ವಾಸೀ ಹಿಂದುಮುಂದೂಕಾಣದ ಮಹ- ಅಂಧಕಾರಣ್ಯದಲಿ ಸಲಹಿದೆ ಬಂಧ ಮೋಚಕನಹುದೋ ಅನಾಥ ಬಂಧು ನೀನೆಂದು ನಂಬಿದೇ 2 ಕರುಣಾಸಾಗರನೇ ನಿನ್ನಾ-ನಾ ನಂಬಿದೆ ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ ಪರಮಸಾಧನ ಕಾಣದೇ-ಪರಿತಪಿಸುವೇ ನಿರುತ ಭವಸಂಕೋಲೆಯಾ ಕಡಿದು ಪೊರೆಯುವುದೋ ಶ್ರೀ ವೆಂಕಟೇಶನೆ ಸ್ಮರಿಪರಘ ಪರಿಹರಿಪ ಶ್ರೀ- ಉರಗಾದ್ರಿವಾಸವಿಠಲ ಪ್ರಭೋ 3
--------------
ಉರಗಾದ್ರಿವಾಸವಿಠಲದಾಸರು