ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಂದು ಹೋಗುವರೆಲ್ಲ ಹೊರತು ತಂದು ಕೊಡುವರಿಲ್ಲ ಪ ಕಷ್ಟಪಡುವೆವು ಅ.ಪ ಊರಿನ ಜನವಷ್ಟು | ಒಳ್ಳೆಯ ಶೀರೆ ಕುಪ್ಪಸ ತೊಟ್ಟು ನೀರಿಗೆ ಪೋಗುವ ದಾರಿಯಲಿ ಬಹರು ವಾರಿಗೆಯವರಂತಿಹುದಾನೆಂದಿಗೂ 1 ಹಿತವಾದಡಿಗೆಯ ಮಾಡಿಡಬೇಕು ಗತಿಗೆಟ್ಟ ರೋಗಿಗಳಿಗೆ ಅಕಟಾ 2 ಗಂಡನ ಕಡೆಯವರ | ಸೇವಿಸಿ ಬೆಂಡಾಯ್ತು ಶರೀರ ಯಾವ್ಯಾವ ಊರಿಗೊ ರೋಕಲಾರೆ ಹಾ 3 ನೀರು ಸೇದಲಾರೆ | ವುಂಡು ದೂರುವರು ಬೇರೆ ಸೋರುವುದು ಮನೆಯು ಸುಖವು ಕಾಣೆ ತೌರುಮನೆಯಾಸೆ ತಪ್ಪೆ ಹೋಯಿತು 4 ಅಕ್ಕಿಬೇಳೆಯಿಲ್ಲ | ಮುಗಿದಿತು ರೊಕ್ಕಮೂಲವೆಲ್ಲ ಇಕ್ಕಿ ಇಕ್ಕಿ ಕೈಬರಿದಾಯಿತು ಪೊಂ- ಬಕ್ಕಿದೇರ ಗುರುರಾಮ ವಿಠಲ 5
--------------
ಗುರುರಾಮವಿಠಲ
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ
ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ. ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ. ಅಂಗಜ ಜನಕ ಶ್ರೀರಂಗನಾಯಕ ನಿಮ್ಮ ಸಂಗತಾಪದಿಂ ತಪಿಸುತಲಿ 1 ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ ಮೋಸವೋದೆನೋ ಮರುಳನಂದದಿ 2 [ಬಂದ] ಅರಿಯದ ಈ ಪಸುಳೆಯನು ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ3
--------------
ನಂಜನಗೂಡು ತಿರುಮಲಾಂಬಾ