ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುತಾದೋ ಪದ ಬರುತಾದೋ ಪ ಪದುಮನಾಭನ ದಿವ್ಯಸದಮಲಪಾದದ ವಿಧವಿಧ ಮಹಿಮೆಯಯ ಪೊಗಳಿ ಬಾಳುವ ಪದ ಅ.ಪ ಛಂದಸ್ಸು ಮೀಮಾಂಸೆ ಅಂದದ ಯತಿಗಣ ಒಂದು ನಾನರಿಯದೆ ಸಂದೇಹಮಿಲ್ಲದೆ ಮಂದರಧರನಡಿ ಒಂದೇ ತ್ರಿಭುವಿಗೆ ಮಿಗಿ ಲೆಂದು ಪಾಡುತಲಾನಂದ ಪಡೆಯುವ ಪದ 1 ಸಕಲರು ತೆಗೆದಿಟ್ಟ ಅಕತಪಚಟಯೆಂಬ ವಖಿಲಮಂ ಗಣಸದೆ ಪ್ರಕಟಮಿನಿತಿಲ್ಲದೆ ಅಕಟಕಟೆನ್ನುತ ನಿಖಿಲವ್ಯಾಪಕನಂಘ್ರಿ ಭಕುತಿಯಿಂ ಭಜಿಸುತ ಮುಕುತಿ ಪಡೆಯುವ ಪದ 2 ಅಳುಕದೆ ಲೌಕಿಕ ತಿಳೆಸುಖಕೆಳಸದೆ ಮಲಿನದಿ ಸಿಲ್ಕದೆ ಚಲನವಲನಿಲ್ಲದೆ ಜಲಜಾಕ್ಷ ಭಕ್ತರ ಸುಲಭ ಶ್ರೀರಾಮನಂ ಒಲಿಸಿ ಪ್ರಾರಬ್ಧವ ಗೆಲಿದು ನಲಿಯುವ ಪದ 3
--------------
ರಾಮದಾಸರು