ಮಾರುತಿ ಪ್ರಾಣ ಮೂರುತಿಪ
ಸಾರುವೆ ತವಶ್ರುತಿ ಧೀರ ಭಾರತೀಪತಿ ಅ.ಪ
ಭರದಿ ಸಾಗರ ಹಾರಿ ದುರುಳನ ಪುರ ಸೇರಿ
ವರಮಾತೆಗುಂಗುರ ತೋರಿ ವನಗೈದಿ ಸೆರೆ ಶೂರ 1
ಸೊಕ್ಕಿನಿಂದ ಮೆರೆವಂಥ ರಕ್ಕಸರನು ಪಂಥ
ಇಕ್ಕಿ ನೀ ಗೆಲಿದಂಥ ಅಃಭಾಪುರೆ ಹನುಮಂತ 2
ಸಿರಿಯ ರಾಮನಿಗಿತ್ತ ವರ ಸೀತಾವೃತ್ತಾಂತ
ವರ ಸದ್ಭಕ್ತರ ಪ್ರೀತ ಪಾಲಿಸೊ ವಿಖ್ಯಾತ 3