ಭೀಮಸೇನನ ಸ್ತ್ರೀವೇಷ
ಭೀಮನು ಸರ್ವಜನಾ ಮೋಹಿಸುವಂಥಕಾಮಿನಿ ರೂಪವ ತೊಟ್ಟನು ಪ
ಸೋಮ ಸಮಾನನ ತಾಮರಸಾಂಬಕಹೇಮಾಂಬರ ಕಂಠೀಮಣಿ ಗಣ ಸು -ತ್ರಾಮ ಕಾಮಿನಿಯಾ ಮೋಹಿಪ ಅಬಿ -ರಾಮರೂಪ ನಿಸ್ಸೀಮ ಬಲಾಢ್ಯ ಅ.ಪ.
ಬಟಕುಚಪಟ ಕರಪುಟದಿಂದ ಹಿಗ್ಗಿಸಿ ತೀಡುತ ಅಂ-ಗುಟ ತುದಿಲೆಳೆದೆಳೆದುಟಿ ರಕ್ತಿಮೆಯನು ನೋಡುತಕುಟಿಲಾಳಕನ್ಯಾವರಿಸುತ ಪಟುಮಾತಾಡುತವಿಟರಿಗೆ ಸ್ಮರಸಂಕಟವನು ಹೃದಯದಲೂಡುತ ಪುಟ್ಟಚಂಡ ಹಾರಿಸಿ ನಟನೆ ಮಾಡುವಾ -ರ್ಭಟಕಂಜಿಹ ವಿಟಪಟಲ ಹಾಂಗಿರಲದುವಟುರಿದ್ದರು ಯತಿ ಮಠಮಂದಿರ ಲಂ -ಪಟವ ಬಿಟ್ಟ ಮಿಟಿಮಿಟಿ ನೋಡುವರೋ 1
ಕರಿಕಲಭಗಮನ ಸೊರಗಿದ ಕಟಿಕಂಠೀರವುವಿಠಲ ನಯನಜತ ಎರಳೆಗಳ್ ಮನೆಯನು ಸೇರವುಸರಸ ಸ್ವರದಿಂದ ಪರಿಭ್ರಮಿಸಿತು ಕಲಕಿರವುಸುರನರವರ ಸುಂದರಿಯರ ಚಲುವಿಕೆ ಮಾರವು ಹೆರಳ್ ಬಂಗಾರವು ಮಲ್ಲಿಗೆ ಸರಗೀ ಸರಹರಳ್ ಕಂಕಣ ಬಳೆ ಸರಳ್ ಬೆರಳುಂಗುರಅರಳ್ ಮಲ್ಲಿಗೆ ಸರ ಕೊರಳ್ ಗಂಧವ ಕಂಡುಮರುಳ್‍ಗೊರಡ ಜನ ಹಗಲಿರುಳು ಧೇನಿಪರೊ 2
ಮೃಗಮದತಿಲಕವು ಮುಗುಳ್ ನಗೆಮೊಗ ಬಿಂಬಾಧರಖಗಯುಗದಂದದಿ ಝಗಝಗಿಸುತಿಹ ಪಯೋಧರಅಘಹರ ರಾಜಗೋಪಗ ಸಖ ಪಾರ್ಥ ಸಹೋದರಬಗೆ ಬಗೆಯಲಿ ಮನದಗ ಅಘಹರನ ಕೃತಾದರಮುಗುಳ್ ಮಲ್ಲಿಗೆ ಸರ ತೆಗೆತೆಗೆದ್ಹಾಕುತಸೊಗಸು ಸುಗುಣರೂಪ ತಗುಬುಗಿಲೆನುತಿರೆಜಗದ ಜನರ ಮನ ಭುಗಿಭುಗಿಲೆನುತಿರೆಬಗೆ ಬಗೆಯಲಿ ಒಂದ್ಹಗಲ್ಯುಗವಾಗೆ 3