ಪಾಲಸಾಗರ ಸಂಭೂತೆ ಕೈವಲ್ಯದಾತೆ
ಪಾಲಿಸೆನ್ನನು ನಿಜಮಾತೆ ಪ
ಆಲಿಸು ನಿನ್ನಯ ಬಾಲನ ನುಡಿ ಈ
ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ
ನಿತ್ಯ ನಿರ್ಮಲೆ
ಈ ಮಹಾಮಹಿಮ ವಿಶಾಲೆ
ಕಾಮನ ಜನನಿ ಸುಲೀಲೆ ಜಲಜಸುಮಾಲೇ
ತಾಮರಸಾಂಬಕೆ ಸಾಮಜಭವ ಸು -
ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ -
ಪಾದ ಯಾಮ ಯಾಮಕೆ ನಿತ್ಯ
ನೇಮದಿ ಭಜಿಪೆ ಶ್ರೀರಾಮನ ತೋರೆ 1
ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ
ವೇದವತಿಯೆ ರುಕ್ಮಿಣಿ
ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ
ಖೇದಗೊಳಿಸುವ ಭವೋದಧಿ ದಾಟಿಸಿ
ಮೋದ ಕೊಡುವ ಪಂಚಭೇದಮತಿಯನಿತ್ತು
ಯಾದವಗುಣವನುವಾದ ಮಾಡಿಸಿ ನಿತ್ಯ
ಮೋದಬಡಿಸು ಶ್ರೀ ಮಾಧವರಾಣಿ 2
ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ
ಸೀತೆ ನೀನೆ ಲೋಕಪವಿತ್ರೆ
ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ
ವೀತಭಯಳೆ ತ್ರಿನೇತ್ರೇ
ಪಾತಕವನಕುಲವಿತಿಹೋತ್ರ ಸುರ -
ವಿನುತ ಸುಖವ್ರಾತ ಕೊಡುವ ನಮ್ಮ
ದಾತ ಗುರುಜಗನ್ನಾಥವಿಠಲಗೆ ನೀ
ನೀತಸತಿಯೆ ಎನ್ನ ಮಾತೆ ವಿಖ್ಯಾತೆ3