ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಮಂಗಳಂ ಪ. ವೈಕುಂಠವಾಸನಿಗೆ ವಾಣೀಶಗ್ವಲಿದವಗೆ ಲೋಕದಲಿ ಪ್ರಹ್ಲಾದಗ್ವಲಿದ ಲಕ್ಷ್ಮೀಶಗೆ ಪ್ರಾಕೃತದಲಿ ವಸುದೇವ ಪುತ್ರನೆಂದೆನಿಸಿ ಜೋಕೇಲಿ ಗೋಕುಲಕೆ ಜಾರಿ ಬಂದವಗೆ 1 ಪುಟ್ಟ ಮಗುವಾದವಗೆ ಪೂತಣಿಯ ಕೆಡಹಿದಗೆ ತೊಟ್ಟಿಲೊಳು ಮಲಗಿ ತೂಗಿಸಿಕೊಂಬಗೆ ದುಷ್ಟ ಶಕಟನÀ ಮುರಿದು ತೃಣಾವರ್ತನೆಂಬ ದೈತ್ಯನ ಮುಟ್ಟಿ ಪ್ರಾಣವ ತೆಗೆದ ಮುದ್ದುಕೃಷ್ಣನಿಗೆ 2 ಅಂಬೆಗಾಲಿಕ್ಕಿದಗೆ ಅಂಗಳದೊಳಾಡಿದಗೆ ತುಂಬಿದಾ ಪಾಲುಗಳ ತಾನೆ ಸವಿದು ಇಂಬಿಟ್ಟು ಬಾಲರಿಗೆ ಸವಿ ಇಕ್ಕಿ ಸವಿದವಗೆ ಅಂಬುಜಾಕ್ಷ ನಮ್ಮ ಹಯವದನಗೆ 3
--------------
ವಾದಿರಾಜ
ನೋಡೆಲೆ ಸುಮತಿ ಪೆಣ್ಮಣಿಗೊಲಿದ ಗಾಡಿಗಾರ ಚೋರ ರೂಢಿಗೆ ರಂಗ ಪ. ಈಡುಂಟೇ ಶತ ಜೋಡಿಶೆ ಶಿಶುಗಳ ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ. ಅಪ್ರಾಮೇಯನ ಗುಡಿಯೊಳಗಿದನೆ ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ ಳೊಪ್ಪುತಲಿಹನೆ ಬೆಡಗಿಂದೊಡನೆ ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ ದರ್ಪ ಕೋಟಿ ತೇಜದಿ ಮೆರೆವನ 1 ಅರವಿಂದದಳ ವೆಂಕಟನಿರುವಲ್ಲೆ ತಿರುಮಲ ನಾರಾಯಣ ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ ಸರಸ ಸಂಚರಿಸುವ ವರ ಚೈತ್ರದ ರಥ ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ ದುರಿತ ದೂರ ಕಣಿ ವರಪ್ರದ ದೇವ ಅರಿದವರಿಗೆ ಕಣ್ ತೆರೆವನು ದೇವ ನೋಡೆ 2 ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು ಇಪ್ಪನೆ ತನಯರನು ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ ತಪ್ಪನೆಲ್ಲವಪ್ಪಿಪ್ಪನೊ ಕರುಣವ ಸರ್ಪಶಯನ ತಿಮ್ಮಪ್ಪನ ಕರುಣ ಒಪ್ಪ ತೆರದಿ ಸ್ತುತಿ ಮಾಡುವ ಬಾರೆ 3
--------------
ಸರಸ್ವತಿ ಬಾಯಿ