ಹೆಮ್ಮೆಯಾ ಬಿಡು ಬಿಡು ಮನುಜಾ ಪ
ಬೊಮ್ಮ ದೂರ್ವಾಸಾದಿಗಳೆಲ್ಲಾ |
ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ
ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ |
ನುಡಿಯಲಿ ತಾ ವಾಯು ವಶದಿಂದಲಿ |
ತಡಿಯದೆ ಬಹುಮುಖ ಕಮಲಾಸನ ಕಂಡು |
ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1
ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು |
ಮತ್ಸರಿಸಲು ಅಂಬೃಷಿಯೊಡನೆ |
ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ |
ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2
ಮೇರು ಗಿರಿಯ ಸಮವಾಗಿ ಸೂರ್ಯನ ರಥಾ |
ದಾರಿ ಕಟ್ಟುವೆನೆಂದು ಬೆಳೆಯುತಲಿ |
ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ |
ಧಾರುಣಿಯೊಳಗೇ ನಾದನೆಂಬುದ ಕೇಳಿ 3
ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ |
ಕಕ್ಷದಿ ನಿಲುವ ರರೆನುತಾ |
ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ |
ದಕ್ಷ ಮನ್ಮಥರೇನಾದರೆಂಬುದ ಕೇಳಿ 4
ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ |
ಬಹುತರು ನಮ್ರವೃತ್ತಿಯ ತ್ಯಜಿಸಿ |
ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ |
ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5