ಪಾರ್ವತಿಪತಿ ಆರ್ವರಾಭಿಷ್ಟಿಯ
ಸರ್ವಪೂರಿಸಿ ತನ್ನಿಜಪದ ಸೇವಕನಿಗೆ
ಕರುಣವ ಬೀರ್ವನಿಗೆ
ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1
ತಾರ್ಕು ಪದೇಶಿತಾ ಸರ್ಕನೆ
ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ
ಅಘತಮರ್ಕನಿಗೆ ಸುರಸ
ಪರ್ಕನಿಗಾರತಿಯಾ ಬೆಳಗೀರೇ ಸೋ 2
ಅಂಬುಶಶಿಬಿಂಬಾಂಕಿತ ಜಟೆ
ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ
ಗಜಚರ್ಮಾಂಬರಗೆ ಹರಸಿ
ಶ್ವಂಭರಗಾರತಿಯ ಬೆಳಗಿರೇ ಸೋ3
ಕರ್ಪುರ ಗೌರವತನು
ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ
ಹತ ಕಂರ್ದಪನಿಗೆ
ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4
ಕುಂದದಿ ಆನಂದದಿ ಮಹೀಪತಿ
ನಂದನ ಸಲಹುವ ಘನ ಅಶಿತ
ಕಂದರಿಗೆ ಪೂಜಿತ ಇಂದರಗೆ
ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5