ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ
ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ
ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ
ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ
ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1
ಸುಂದರಕಾಯ ಇಂದಿರೆಯ ಪ್ರಾಣಪ್ರಿಯ
ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2
ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ
ಘಾಸಿ ಮಾಡದೆ ಸಲಹಯ್ಯ 3