ನಂಬಿದೆನೇ ನಿನ್ನ ಅಂಬುಜನಯನೆ
ನಂಬಿದೆ ನಿನ್ನ ಪ.
ನಂಬಿದೆ ನಿನ್ನನು ಅಂಬುಧಿಶಯನನೆನ್ನ
ಡಿಂಬದಿ ನಿಲುವಂಥ ಸಂಭ್ರಮ ಕೊಡು ತಾಯೆ ಅ.ಪ.
ಆರು ಮೂರೆರಡೊಂದು ಮೇರೆ ಇಲ್ಲದೈದು
ಜಾರರು ಸೇರಿದರೆ ತಾಯಿ
ತೋರುತ ಕರುಣವ ಬೀರುತ ವರ ಸಂಗ
ದೂರಮಾಡಿಸಿ ಪಾರುಗಾಣಿಸು ತಾಯೇ 1
ಅಗಣಿತ ಮಹಿಮನ ಬಗೆಬಗೆ ಪೂಜಿಸಿ
ಜಗದಾಖ್ಯಾನ ನೀ ಮಿಗೆ ವಲಿಸಿಹೆ ತಾಯೆ
ಮಗುವೆಂದು ಭಾವಿಸಿ ಚಿಗಿದು ಕಂಬದಿ ಬಂದ
ನಗಧರ ನರಹರಿ ಸಿಗುವ ಪರಿಯ ತೋರೆ2
ಕಲಿಯುಗದಲಿ ಶ್ರೀ ಶ್ರೀನಿವಾಸನ ಜ್ಹಾಯೆ
ವಲಿದು ಭಕ್ತರ ಕೊಲ್ಹಾಪುರ ಮೆರೆಸಿಹೆ ತಾಯೆ
ಕಲಿಮಲ ಕಳೆದು ನಲಿದು ಭಕ್ತರ ಕಾಯೆ
ಛಲವ್ಯಾಕೆ ಹರಿ ಸಹ ನÀಲಿಯುತೆ ಬಾರೆ 3