ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಹರಿ ಗೋವಿಂದ ಪ ಗೋವಿಂದ ಪರಮಾನಂದ ಮುಕುಂದಅ ಮಚ್ಛ್ಯಾವತಾರದೊಳಾಳಿದನೆ - ಮಂದರಾಚಲ ಬೆನ್ನೊಳು ತಾಳಿದನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚೆ ಹಿರಣ್ಯಕನ ಸೀಳಿದನೆ1 ಕುಂಭಿನಿ ದಾನವ ಬೇಡಿದನೆ - ಕ್ಷಾತ್ರ-ರೆಂಬುವರನು ಹತ ಮಾಡಿದನೆಅಂಬುಧಿಗೆ ಶರ ಹೂಡಿದನೆ - ಕಮ-ಲಾಂಬಕ ಗೊಲ್ಲರೊಳಾಡಿದನೆ 2 ವಸುದೇವನುದರದಿ ಪುಟ್ಟಿದನೆ - ಪಲ್‍ಮಸೆವ ದನುಜರೊಡೆಗುಟ್ಟಿದನೆಎಸೆವ ಕಾಳಿಂಗನ ಮೆಟ್ಟಿದನೆ - ಬಾ-ಧಿಸುವರ ಯಮಪುರಕಟ್ಟಿದನೆ 3 ಪೂತನಿಯ ಮೈ ಸೋಕಿದನೆ - ಬಲುಘಾತದ ಮೊಲೆಯುಂಡು ತೇಕಿದನೆಘಾತಕಿಯನತ್ತ ನೂಕಿದನೆ - ಗೋಪವ್ರಾತ ಗೋಗಳನೆಲ್ಲ ಸಾಕಿದನೆ4 ಸಾಧಿಸಿ ತ್ರಿಪುರರ ಗೆಲಿದವನೆ - ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆಸಾಧುಸಂತರೊಡನೆ ನಲಿದವನೆ - ಬಾಡದಾದಿಕೇಶವ ಕನಕಗೊಲಿದವನೆ 5
--------------
ಕನಕದಾಸ
ನಭಕೀಶ - ನಭಕೀಶ ಪ ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ. ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ 1 ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ 2 ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು 3 ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ 4 ಕ್ರತು ರಾಜಸೂಯ 5 ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ 6 ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ 7 ಎಕಮೇವ ನಲಿ - ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ 8 ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ 9 ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು 10 ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ11
--------------
ಗುರುಗೋವಿಂದವಿಠಲರು
ರಾಮಾನಂದ ವಿಠಲ | ಪ್ರೇಮದಲಿ ಪೊರೆಯೋ ಪ ಭಾಮಿನಿಯ ಮೊರೆ ಕೇಳಿ | ಪ್ರಾರ್ಥಿಸುವೆ ಹರಿಯೇ ಅ.ಪ. ಅನುವಂಶಿಕವಾಗಿ | ಗಾನಕಲೆಯುಳ್ಳವಳುಮೇಣು ಸಂಸ್ಕಾರಗಳು | ಹೊಂದಿಕೊಳ್ಳುತಲೀಈ ನಾರಿ ಯಂಕಿತವ | ಕಾಂಕ್ಷಿಸುತ್ತಿಹಳಯ್ಯಶ್ರೀನಿವಾಸನೆ ಇವಳ | ಬಿನ್ನಪವ ಸಲಿಸೋ 1 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬ ಸ-ನ್ಮತಿಯನೇ ಕರುಣಿಸುತ | ಕಾಪಾಡೊ ಹರಿಯೆಗತಶೋಕ ಗತಿಪ್ರದನೆ | ಹತಮಾಡಿ ಗರ್ವಗಳಸ್ಮøತಿಗೆ ವಿಷಯನು ಆಗಿ | ಸತತ ಪೊರೆ ಇವಳಾ 2 ಮೋದ ಕೊಡು ದೇವಾ 3 ಭವವೆನಿಪ ಅಂಬುಧಿಗೆ | ಪ್ಲವವೆನಿಪ ತವನಾಮಸ್ತವನ ಸಂತತಗೈವ | ಹವಣೆಯಲಿ ವಜ್ರಾಕವಚವನೆ ತೊಡಿಸುತ್ತ | ಭವತಾರ ಕೆಂದಿನಿಸೋಧ್ರುವವರದ ಕರಿವರದ | ಕಾರುಣ್ಯಮೂರ್ತೇ 4 ಛಲದ ಮುನಿ ಅನುಸರಿಸಿ | ಶಿಲೆಯ ಸತಿಯಳ ಮಾಡಿಜಲಜಾಕ್ಷಿ ಜನಕಜೆಯ | ಕೈಯನೇ ಪಿಡಿದೂಇಳೆಯ ಭಾದಕ ಕಳೆದ | ಚೆಲುವಂಗದವ ಸೂರ್ಯಕುಲ ತಿಲಕನೇ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |ಒಬ್ಬ ಮಾವನ ಕೂಡೆ ಕಡಿದಾಡಿದ ||ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |ಒಬ್ಬ ಭಾವಗೆ ಬಂಡಿ ಬೋವನಾದ 1ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |ಕುಂಭಿನೀಪತಿಯ ಸಂಹಾರ ಮಾಡಿದ ||ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |ಅಂಬುಜಾಸನಗೆ ತಾ ಸ್ವಾಮಿಯಾದ 2ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |ಇಮ್ಮೆಯ್ಯವರಿತು ಸಂಹಾರ ಮಾಡಿದ- ||ರಮ್ಯ ಮೂರುತಿ ಪುರಂದರವಿಠಲ ದೇವೇಶ |ಬೊಮ್ಮಮೂರುತಿಗೆಲ್ಲಿ ಬಂಧು ಬಳಗ 3
--------------
ಪುರಂದರದಾಸರು
ಶರಣು ಭಾಸ್ಕರಕುಲಶರಧಿ ಪೂರ್ಣಸೋಮಕರುಣಾಮೃತ ಪೂರ್ಣರಾಮ ಪ.ನೃಪದಶರಥನ ತ್ಯಜಿಸಿ ಸೌಮಿತ್ರನ ಕೂಡಿವಿಪಿನದಿ ಸೀತೆ ಕಾಣದೆ ನೀಕಪಿಗಳ ನೆರಹಿ ಅಂಬುಧಿಗೆ ದಾರಿಯ ಬಲಿದೆಕಪಟಿ ರಾವಣನ ಸವರಿದೆ 1ನಿಜರಾಣಿಯ ಯಜಿÕಯ ಮುಖದಲಿ ಕೈಕೊಂಡುಸುಜನವಿಭೀಷಣನ ಹೊರೆದೆತ್ರಿಜಗವಂದಿತ ಪುಷ್ಪಕವನೇರಿ ಬಂದು ಅನುಜ ಭರತನ ಕಾಯ್ದೆ ಅಂದು 2ಹಲವು ಸಾಸಿರ ಅಬ್ದ ಅಯೋಧ್ಯೆಯನಾಳ್ದೆ ಅನಿಲತನಯನ ಸೇವೆಗೊಲಿದೆಸುಲಭದಿ ಮುಕ್ತಿ ತೋರಿದೆ ಪ್ರಸನ್ವೆಂಕಟನಿಲಯಭಕ್ತರಿಗೆ ಇತ್ತೆತುಷ್ಟಿ3
--------------
ಪ್ರಸನ್ನವೆಂಕಟದಾಸರು