ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |ಒಬ್ಬ ಮಾವನ ಕೂಡೆ ಕಡಿದಾಡಿದ ||ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |ಒಬ್ಬ ಭಾವಗೆ ಬಂಡಿ ಬೋವನಾದ 1ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |ಕುಂಭಿನೀಪತಿಯ ಸಂಹಾರ ಮಾಡಿದ ||ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |ಅಂಬುಜಾಸನಗೆ ತಾ ಸ್ವಾಮಿಯಾದ 2ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |ಇಮ್ಮೆಯ್ಯವರಿತು ಸಂಹಾರ ಮಾಡಿದ- ||ರಮ್ಯ ಮೂರುತಿ ಪುರಂದರವಿಠಲ ದೇವೇಶ |ಬೊಮ್ಮಮೂರುತಿಗೆಲ್ಲಿ ಬಂಧು ಬಳಗ 3
--------------
ಪುರಂದರದಾಸರು