ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು
ಸಿರಿದೇವಿಯೊಡನೆÉ ನೀಂ ಶಯನಿಸು 1
ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು
ಅಪರಿಮಿತಾನಂದದಿಂ ಶಯನಿಸು 2
ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ
ಅಂಬುಜಾನನೆಯೊಡವೆರಸಿ ನಲಿಯುತ 3
ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ
ಪರಮಭಕ್ತರು ಬಂದು ಕರಮುಗಿದು ನಿಂದಿರಲು
ಕುಡುತೆ ಮುದವಂ4
ವರಶೇಷಗಿರಿನಿಲಯನೆÀ ಜಯಜಯತು ವರದನಾರಾಯಣನೆ
ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ
ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ 5