ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಭುಜಗವೇಣಿಯೆ ಪೊರೆಯೆ ಲೋಲೆ ಶ್ರೀ ವರಲಕ್ಷ್ಮಿಯೆ ಪ ಫಾಲ ವಿರಾಜಿತೆ ಅ.ಪ ಇಂದು ಸುಂದರ ಭಾಸಿತೆ ವಿನುತೆ ಬಂಧುರಾಲಕ ಭೂಷಿತೆ ಇಂದಿರೆ ವಿಮಲೆ 1 ಅಂಬುಜಾನನೆ ಕಾಮಿನಿ ವಿಮಲೆ ಬಿಂಬರದನ ವಾಸೆಯೆ ಶಂಬರವೈರಿ ಶುಭಂಕರಿ ಮಹಿತೆ 2 ಪೊಳೆವ ಲೋಚನ ಥಳಕು ದೇವಿ ಬೆಳೆವ ಮಿಂಚಿನ ಬೆಳಕು ದಳಿತ ಕುಸುಮಾವಳಿ ಕಲಿತ ಮುಖಾಮಲೆ 3 ಭೃಂಗವೇಣಿಯೆ ಭಜಿಪೆ ತಾಯೆ ಶೃಂಗಾರ ಭೂಷೆ ಮಂಗಳೆ ಮಾಧವ ಮಂಗಳರೂಪೆ 4 ಮಾನಿನಿ ಗುಣಭೂಷಿತೆ ಸತತಂ ಸಾನುರಾಗದೆ ಸಲಹು ಸರ್ವಸುಖ ಸಂಪದೆ ವರದೆ5
--------------
ಬೇಟೆರಾಯ ದೀಕ್ಷಿತರು
ಮೂರ್ತಿ ಧೃತ ಹೇಮವರ್ಣ ಸರ್ವಾಂಗ ಶೋಭಿತೆ ಕಾಮಿತಾರ್ಥ ಉದಾರಿಣಿ ಕುಂಡಲ ಪಾಣಿ ಪಾತ್ರ ಸುಧಾರಿಣಿ ಸೂರ್ಯ ಸುರಮುನಿಸ್ತೋಮ ಹೃದಯ ಸಂಚಾರಿಣಿ ಕಾಲ ಕಠಾರಿ ಪರಶಿವೆ 1 ಅಂಬುಜಾನನೆ ಸಕಲ ಕುಟುಂಬ ರಕ್ಷಕ ಮೋಹಿನಿ ಶಂಭುದಾನವ ಶಿಕ್ಷಿತೆ ಶಿವ ಪ್ರತಿಬಿಂಬೆ ಸಿಂಹ ಸುವಾಹಿನಿ ಕಂಬುಕಂಧರ ರತ್ನ ಭೂಷಿತೆ ತುಂಬರ ಪ್ರಿಯಗಾಯಿನಿ ಕುಮುದ ಲೋಚನೆÀ 2 ವರದ ಅಭಯ ಕರಾಂಬುಜೇಷಣೆ ವೀಣಾ ಪುಸ್ತಕ ಶೋಭಿತೇ ಪರಮ ಪಾವನ ಚರಿತೆ ಪರಮೇಶ್ವರಿ ಪ್ರತಾಪ ವಿರಾಜಿತೆ ಭರಿತ ಬಂಧ ಕಟಾದಿವಾಸಿನಿ ಭಕ್ತ ಸಜ್ಜನ ಪೂಜಿತೆ ಗುರು ವಿಮಲಾನಂದ ದೇವಿ ಶ್ರೀ ಮಹಾಲಕ್ಷ್ಮೀ ಸಂತತ 3
--------------
ಭಟಕಳ ಅಪ್ಪಯ್ಯ
ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು ಸಿರಿದೇವಿಯೊಡನೆÉ ನೀಂ ಶಯನಿಸು 1 ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿತಾನಂದದಿಂ ಶಯನಿಸು 2 ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ ಅಂಬುಜಾನನೆಯೊಡವೆರಸಿ ನಲಿಯುತ 3 ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ ಪರಮಭಕ್ತರು ಬಂದು ಕರಮುಗಿದು ನಿಂದಿರಲು ಕುಡುತೆ ಮುದವಂ4 ವರಶೇಷಗಿರಿನಿಲಯನೆÀ ಜಯಜಯತು ವರದನಾರಾಯಣನೆ ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ 5
--------------
ನಂಜನಗೂಡು ತಿರುಮಲಾಂಬಾ