ಕಾಯೆ ಕರುಣಾಂಬುಧಿಯೆ
ತೋಯಜನಯನೆ ಪ
ಕಾಯೆ ಕರುಣಿ ಗಿರಿರಾಯನ ಪಟ್ಟದ
ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ
ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ
ಕಂಬುಚಕ್ರಾಂಕಿತಪಾಣಿ
ಅಂಬೆ ನಿನ್ನಯ ಪಾದಾಂಬುಜ ನಂಬಿದೆ
ಬಿಂಬನ ಎನ ಹೃದಯಾಂಬರದಲಿ ತೋರೆ 1
ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ
ಕಾಮಿತ ಸಲಿಸೆನ್ನ ಮಾತೆ
ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ
ಧಾಮದೊಳಗೆ ನೀ ಕ್ಷೇಮದಿ ನಿಲಿಸೀ 2
ದೂತಜನಕತಿ ಪ್ರೀತೆ ಈ ಜಗಕೆ ಮಾತೆ
ಸೀತೆ ಪಾಲ್ಗಡಲಾ ಸಂಭೂತೆ
ದಾತ ಗುರುಜಗನ್ನಾಥ ವಿಠಲಗೆ
ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ 3