ಹೂವಿನ ಚೆಂಡನಾಡುವ ಕಾಂತ ಭಾವಿಪರಿರುವರು ನೋಡುತ್ತ ಪ
ಆಹ ದುಂಡುಮಲ್ಲಿಗೆ ಸಂಪಿಗೆ ಅ.ಪ
ಅಂಬರದೊಳು ವರರಂಭೋರ್ವಶಿಯರು
ಸಂಭ್ರಮದಿಂ ಪೂಮಳೆಗರೆವರ್
ಅಂಬುಜವಾಸಿನಿ ಕೇಶವರೆಂಬೊಲು
ಕಂಬುಕಂದರಮೊಲ್ಲೆ ಹೂವಿನ ಚೆಂಡ 1
ತಾಳಮದ್ದಳೆ ವೀಣೆಯ ನುಡಿಸಿ
ಗಾನವಗೈವರು ಗಂಧರ್ವರು
ನೀನೀಗ ಜಾಲವಮಾಡದೆ ಜಾಜಿ ಶ್ರೀಶನ
ಧ್ಯಾನಿಸಿ ಆಡು ಜಾಜಿಯ ಹೂವಿನಚೆಂಡ 2