ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ