ಪಾರ್ವತಿ
ಪಾದ ಅಂಬುಜಯುಗ ಮನ
ಅಂಬುಜಾದೊಳಗತಿ ಸಂಭ್ರಮದಿಂದಲಿ
ನಂಬಿ ಭಜಿಪನ ಚಿತ್ತದಿ ಇಂಬುಗೊಂಡಿರುವೋ
ಬಿಂಬರೂಪನ ತೋರೆ ಅಂಬುಜಾಂಬಕೆ
ಶಂಭುದೇವನ ಪ್ರಿಯೆ - ದಂಭೋಲಿಧರವಿನುತೆ
ಅಂಬರಮಾನಿಮಾತೆ ಪ್ರಖ್ಯಾತೆ
ಕದಂಬ ಸಂಗ್ರಾಮ ಹಾರೀ
ಕುಂಭಿಣಿಧರಜಾತೆ ರಾಜಿತೆ
ಕಂಬುಚಕ್ರಪಾಣಿ ವಿಶ್ವಂಭರ ಮೂರುತಿ
ಅಂಬುಜಾಪತಿ ನಮ್ಮ ಗುರುಜಗನ್ನಾಥವಿಠಲನ್ನ
ಕಾಂಬುವತೆರ ಮಾಡೆ ಕರುಣಾಕÀರಳೆ