ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಸುಮ ಗಂಧಿನಿ ಸೀತೆಯೆ ಪ ಮಂಜೀರ ಭೂಷೆಯೆ ಮಂಜುಸುವಾಣಿಯೆ ಕಂಜನಾಭ ರಾಮ ಭಾಮೆಯೆ ಮಂಜುಳಾಂಗಿಯೆ 1 ಅಂಬುಜಪಾಣಿಯೆ ಅಂಬುಜನಾಭಿಯೆ ಬಿಂಬಫಲ ಸದೃಶಾನನೆ ಕಂಬುಕಂಧರೆ 2 ಕ್ಷೋಣೀಷ ಸನ್ನುತೆ ವಾಣೀಶ ವಂದಿತೆ ಏಣ ನೇತ್ರೆ ಶ್ರೀರಾಮ ಸುಪ್ರಾಣನಾಯಕಿ 3 ಸುರರಚಿರ ಕುಂತಲೆ ಪರಿಜನ ವತ್ಸಲೆ ನಿರುಪಮ ವಾಣಿಸುನ್ನುತೆ ಪ್ರಣವಾಂಚಿತೆ 4 ಮಾನವ ಸೇವ್ಯಯೆ ಧೇನುಪುರಿಕಾಂತ ಸುಪ್ರಿಯೆ ರಾಮವಲ್ಲಭ 5
--------------
ಬೇಟೆರಾಯ ದೀಕ್ಷಿತರು
ಪಾಲಿಸೆ ಪದುಮಾಲಯೆ, ನೀನೇ ಗತಿ ಪ ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ- ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ಅಪ ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ- ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣಸಂ ಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸೆ ಹರಿಪ್ರಿಯೆ 1 ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕರುಣಾಸಿಂಧು ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖನು ಸುರರ ಬಾಧಿಸೆ ಹರಿವರರ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ 2 ಅಜ ಮನಸಿಜ ಜನನಿ ಅಂಬುಜಪಾಣಿ ನಿತ್ಯ ಕಲ್ಯಾಣಿ ಕುಜನಮದರ್Àನ ವಿಜಯವಿಠ್ಠಲ ಭಜಿಸಿ ಪಾಡುವ ಭಕ್ತಕೂಟವ ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ 3
--------------
ವಿಜಯದಾಸ
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ಶ್ರೀ ಪಾರ್ವತಿದೇವಿಯ ಸ್ತೋತ್ರ ಮಾನಿನಿ ರನ್ನೆಪಾರ್ವತಿ ಪಾಲಿಸೆನ್ನ ಪ ಸಾರಥಿ ಮನದಭಿಮಾನಿಯೆ ನೆನೆವೆನು ನಿನ್ನನುಅನುಕರಿಸೆನ್ನನು ಅಂಬುಜಪಾಣಿ 1 ಮಂಗಳೆ ಮೃಡನಂತರಂಗಳೆ ಹರಿಪದಭೃಂಗಳೆ ತುಂಗಳೆ ಪನ್ನಗವೇಣಿ 2 ಗುಣಪೂರ್ಣ ವೇಣುಗೋಪಾಲ ವಿಠಲನ್ನಕಾಣಿಸಿ ಕೊಡುವಂಥ ಶೂಲಿಯ ರಾಣಿ 3
--------------
ವೇಣುಗೋಪಾಲದಾಸರು
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪಇಂದಿರಾದೇವಿಯೆ ಮಂದರೋದ್ಧರನ ರಾಣಿಇಂದೀವರಾಕ್ಷಿ ಆನಂದದಲಿ 1ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದಪದ್ಮವ ತೋರಿ ಉದ್ಧರಿಸುವಳೆ 2ಅಂಬುಜಪಾಣಿಯೆ ಅಂಜುಜಾಕ್ಷನ ರಾಣಿಅಂಬುಧಿಶಯನನ ಪೊಂದಿರ್ಪಳೆ 3ಆದಿಕಾರಿಣಿ ಪತ್ರಾದಿ ರೂಪದಿ ಹರಿಯಆರಾಧಿಸುವಿ ಸರ್ವರಾಧಾರಿಯೆ 4ಹೆದರದೆ ಭೃಗುಮುನಿ ಒದೆಯೆ ಪಾದದಿಂದಕದನವ ಮಾಡಿದ ಕಲ್ಯಾಣಿಯೆ 5ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲುಮುಕ್ತಿ ಮಾರ್ಗವ ತೋರಿ ಸಲಹುವಳೆ 6ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮಪಾದಸ್ಮರಣೆ ಮರೆಯದಂತೆ ಕರುಣಿಪುದು 7ಪಂಕಜನಾಭನ ಕಿಂಕರರನ್ನು ಕಾಯ್ವಬಿಂಕನಿನ್ನದು ಸರ್ವ ಅಲಂಕಾರಿಣಿ8ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನಕ್ಷಣ ಬಿಡದಲೆ ತೋರು ನಮಿಸುವೆನು 9
--------------
ನಿಡಗುರುಕಿ ಜೀವೂಬಾಯಿ