ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಹರ ಒಬ್ಬ ತಾನೆ ಬಲ್ಲಾ | ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಪ ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ | ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು 1 ಫಣಿಯಾಭರಣವು ಪೆಡೆಯೆತ್ತಿ ಇರಲು | ಮಣಿ ರುಂಡಮಾಲೆ ತೂಗಾಡಲು | ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು 2 ಕಾಳಕೂಟದ ವಿಷಬಿಂದು ಮಾತುರನುಂಗೆ | ತಾಳಲಾರದೆ ತಳಮಳವಗೊಂಡು | ಕಾಳಿಮರ್ದನ ಕಮಲಾಯತಾಕ್ಷ ಎನ್ನ | ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು3 ಗಜಮುಖ ತಾಳವ ಪಿಡಿದು ತಥೈ ಎನ್ನಿ | ಅಜಸುತ ರಿಪು ಮದ್ದಳಿಯೆ ಮುಟ್ಟಿ | ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ | ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು 4 ಆರು ಮುಖದವ ಶಂಖವನ್ನು ಊದೆ | ಭೈರವ ನಾಗಸ್ವರವ ನುಡಿಸೆ | ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ| ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು 5 ಗೋರಾಜ ಸರಿಗಮಪದನಿಸ ಎಂದು ನಲಿಯೇ | ಉರಗಾದಿ ಮೂಷಕಾದಿ ಚಿಗಿದಾಡಲು | ವಾರಣದ ಗಂಗೆ ಸಿರದಲಿ ತುಳುಕಲು | ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು 6 ತುಂಬುರನಾರಂದ ತಂದನ್ನಾತಾ ಎನ್ನೆ | ಅಂಬರದಿಂದ ಪೂಮಳೆಗೆರೆಯೆ | ಅಂಬುಜಪತಿ ಶಿರಿ ವಿಜಯವಿಠ್ಠಲ ವಿ ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು 7
--------------
ವಿಜಯದಾಸ