ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ