ನಂಬಿ ತುತಿಸಿರೋ ರಾಘವೇಂದ್ರ ಧ್ವರಿಯಾ
ಸನ್ಮುನಿ ಕುಲವರಿಯಾ ಪ
ಅಂಬುಜನಾಭನಿಗತಿ ಪ್ರೀಯಾ
ಸಜ್ಜನರಿಗೆ ಸಹಾಯ ಅ.ಪ
ಕನಕಶಯ್ಯನ ತನುಜನಾಗಿ ಜನಿಸಿ
ನರಹರಿಯನ್ನೆ ಒಲಿಸಿ
ಅನುಜರಿಗನುದಿನ ತತ್ತ್ವವ ತಾಕಲಿಸಿ
ಮನದಲಿ ಶ್ರೀಹರಿ ಪದವನ್ನೇ ಭಜಿಸಿ
ವರ ಕರುಣವನೇ ಸಲಿಸಿ
ವನಜಭವಾಂಡದಿ ಬಹು ಬಲ್ಲಿದನೆನಿಪ
ನತಜನರಿಗೆ ಸುರÀ 1
ಕಾಮಧೇನು ಸುರತರುವಿಗೆ ಸಮನೀತ
ಕಾಮಿತ ಫಲ ದಾತಾ
ರಾಮ ನರಹರಿ ಕೃಷ್ಣರ ಪದ ದೂತ
ಲೋಕದಿ ಬಹು ಖ್ಯಾತ
ಕಾಮಿನಿ ಸುತ ಧನ ಧಾನ್ಯದ ವ್ರಾತ
ನೀಡುವೊನತಿ ಪ್ರೀತ
ಪ್ರೇಮದಿ ನಿಜಜನಸ್ತೋಮಕೆ ಬಹು ದಾತ
ಯತಿವರ ಕುಲನಾಥ 2
ಪಾತಕವನಕುಲ ವೀತಿಹೋತ್ರನೆನಿಸಿ
ಭೂತಪ್ರೇತ ಮಹ ಭೀತಿಯನೇ ಬಿಡಿಸಿ
ರೋಗವಪರಿಹರಿಸಿ
ಮಾತಪಿತರ ತೆರ ದೂತರ ರಕ್ಷಿಸಿ
ಮನೋಚಿಂತೆಯನೆ ಬಿಡಿಸಿ
ದಾತಗುರುಜಗನ್ನಾಥವಿಠÀಲ ಪದದೂತ
ದಾತ 3