ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ನಂಬಿದೆನೇ ನಿನ್ನ ಅಂಬುಜನಯನೆ ನಂಬಿದೆ ನಿನ್ನ ಪ. ನಂಬಿದೆ ನಿನ್ನನು ಅಂಬುಧಿಶಯನನೆನ್ನ ಡಿಂಬದಿ ನಿಲುವಂಥ ಸಂಭ್ರಮ ಕೊಡು ತಾಯೆ ಅ.ಪ. ಆರು ಮೂರೆರಡೊಂದು ಮೇರೆ ಇಲ್ಲದೈದು ಜಾರರು ಸೇರಿದರೆ ತಾಯಿ ತೋರುತ ಕರುಣವ ಬೀರುತ ವರ ಸಂಗ ದೂರಮಾಡಿಸಿ ಪಾರುಗಾಣಿಸು ತಾಯೇ 1 ಅಗಣಿತ ಮಹಿಮನ ಬಗೆಬಗೆ ಪೂಜಿಸಿ ಜಗದಾಖ್ಯಾನ ನೀ ಮಿಗೆ ವಲಿಸಿಹೆ ತಾಯೆ ಮಗುವೆಂದು ಭಾವಿಸಿ ಚಿಗಿದು ಕಂಬದಿ ಬಂದ ನಗಧರ ನರಹರಿ ಸಿಗುವ ಪರಿಯ ತೋರೆ2 ಕಲಿಯುಗದಲಿ ಶ್ರೀ ಶ್ರೀನಿವಾಸನ ಜ್ಹಾಯೆ ವಲಿದು ಭಕ್ತರ ಕೊಲ್ಹಾಪುರ ಮೆರೆಸಿಹೆ ತಾಯೆ ಕಲಿಮಲ ಕಳೆದು ನಲಿದು ಭಕ್ತರ ಕಾಯೆ ಛಲವ್ಯಾಕೆ ಹರಿ ಸಹ ನÀಲಿಯುತೆ ಬಾರೆ 3
--------------
ಸರಸ್ವತಿ ಬಾಯಿ