ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೋ ಬಂದಾನೇಳೇ ಭಾವೇ ನಿನ್ನರಸಾ| ಮುದದಿ ಪ್ರಾರ್ಥನೆಯ ಮಾಡಿ ಕರೆತಂದೆನೀಗ ಪ ನೊಸಲಲಿ ಇಟ್ಟ ಕಸ್ತೂರಿ ರತ್ನಮಯದಿಂದ| ಪೊಸಪರಿಯ ಕಿರೀಟವಧರಿಸಿ| ಎಸೆವ ಕುಂಡಲದಿಂದ ಪೊಳೆವಾಕದಪುಗಳು| ಬಿಸಿರು ಹದಳ ನೇತ್ರಲೊಪ್ಪುತ ನಮ್ಮ 1 ತುಂಬಿಯಂತೆ ವಳೆಕಾವಳಿ ಶೋಬಿ| ತುಂಬಜ ಮುಖ ಅತಿ ಸುಂದರ ರೂಪಾ| ಕಂಬುಕಂದರದಲಿ ಹಾರದಾ ಕೌಸ್ತಭ ಮಾಲೆ| ಅಂಬುಜಧರ ನೋಡು ಅರನಗೆ ನಗುತ್ತಾ 2 ಗರುಡನ ಮ್ಯಾಲೇರಿ ಕೊಂಡುತಾಹರುಷದಿ| ಪರಮ ಪಾವನೆ ಕೇಳು ಸದ್ಭಕುತಿಂದ| ಧರೆಯೊಳಾರಾರು ಕರೆದರೆ ಬಷ್ಟುವೆನೆಂಬ| ತೆರ ತೋರಿಸಲು ಮಹಿಪತಿ ನಂದ ನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು