ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು