ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ ಭವ ಸಮುದ್ರ ಅ.ಪ ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ 1 ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ 2 ತಾಯಿ ಬಿಡುವಳೇನು ಶಿಶುವ ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ 3 ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ 4 ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು 5 ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ ಶ್ರೀನಿವಾಸ ಶರಣು ಶರಣು ಜ್ಞಾನವಿತ್ತು ಕಾಯೊ ಮುಂದೆ 6 ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ 7
--------------
ಕೃಷ್ಣವಿಠಲದಾಸರು
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು