ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಕರಿವರದನೆ ನಿನ್ನ ವರಗಳ ಬೇಡುವೆ ವರ ಮತಿ ಪಾಲಿಸೆನ್ನ ಕಾಪಾಡು ಪ. ಅಂಬಾಸುತ ನಿನ್ನ ನಂಬಿದವರಿಗಿನ್ನು ಸಂಭ್ರಮ ದೊರಕದಿಹುದೆ ಪಾದ ಶ್ವೇತಾಂಬರೆ ಮೊಮ್ಮಗನೆ ಕಂಬುಕಂಠಸುತನೆ ಸಂಭ್ರಮದಲಿ ಬಾ 1 ಕಾಲ್ಗೆಜ್ಜೆ ಪೈಝಣ ಘಲ್ಲುಘಿಲ್ಲೆನುತಲಿ ನಿಷ್ಕಾಮದನೆ ಬಾ ನಗುತ ಪ್ರೇಮದ ಪಾರ್ವತಿ ಸುತ ನೀನಲ್ಲವೆ ಕಾಮಿಸಿ ನಿನ ಪದ ಭ್ರಮಿಸಿ ಪ್ರಾರ್ಧಿಸುವೆ 2 ಕಾಯಿಸಿ ಹಾಲುತುಪ್ಪ ಸಕ್ಕರೆಯೀವೆನೊ ಮೂಷಕವಾಹನನೆ ಸೋಸಿಲಿ ಚಿಗುಳಿ ತಂಬಿಟ್ಟು ತೆಂಗಿನಕಾಯಿ ಶ್ರೀಶ ಶ್ರೀಶ್ರೀನಿವಾಸ ಭಕ್ತನಿಗರ್ಪಿಸುವೆ 3
--------------
ಸರಸ್ವತಿ ಬಾಯಿ
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೊ ಎನ್ನ ಗಣಪತಿಯೆ ಪ ಆಲಿಸು ಎನ್ನ ವಿಜ್ಞಾಪನೆಯನು ನೀಂ ಅ.ಪ ಮೂಷಿಕವಾಹನ ಮುನಿಜನ ಪೋಷಣ ಶೇಷಾಭರಣ ವಿಶೇಷ ಮಹಿಮನೆ 1 ಅಂಬಾಸುತ ಹೇರಂಭ ನಿನ್ನಯ ಪಾ- ದಾಂಬುರುಹವ ನೆರೆ ನಂಬಿದೆ ಜೀಯ 2 ಗುರುರಾಮವಿಠಲ ಸ್ಮರಣೆ ಮಾಡುವುದಕೆ ನಿರ್ವಿಘ್ನತೆ ಕೊಡು ಕರುಣವಾರಿಧಿಯೆ3
--------------
ಗುರುರಾಮವಿಠಲ
ರಾಘವೇಂದ್ರ ಜಯತು ಗುರುವರಗೌತಮ ಗೋತ್ರಜ ಪ ರಾಗರಹಿತಾಂತರಂಗ ಭಕ್ತಾವಳಿ ಸಂಗ ಶೃಂಗ ಅ.ಪ ಅಂಬಾಸುತ ಪರಿಪೂಜಿತ ಪಾದವ ತೋರೈ ವಂದಿಪೆ 1 ನಿರುತನಿನ್ನ ಪಾದಪದ್ಮವ ನಮಿಸುವಂಥ ಮನವ ಕೊಡೈ ಪರಮವೈದಿಕನ ಅರಿಯುವ ಶಕ್ತಿಯ ನೀಡು ರಾಘವೇಂದ್ರ2 ತರಳ ಸರಳ ಮೃದುವಚನಪೂರಣ ಸಾಧು ಪೂರ್ಣಸದನ ಶರಣಸುಜನ ವಾಂಚಿತಾರ್ಥದಾತ ಮಾಂಗಿರೀಶ ಪ್ರೀತ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್