ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಪ ದುರುಳ ತಿರುಕನು ನಾನು 1 ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನುಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು2 ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನುವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು 3 ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನುಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು4 ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನುಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು 5
--------------
ಕನಕದಾಸ
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು