ಬೇರೊಬ್ಬರನು ಕಾಣೆನೋ ಪ
ಗರ್ಭದೊತ್ತಿನಲಿ ಇರಿಸಿದವರಾರೋ
ಕೈಕಾಲಸುತ್ತಿನರದಲಿ ಬಿಗಿದವರಾರೋ
ನೇತ್ರವನು ರಚಿಸಿದವರಾರೋ
ತುಂಬಿ ತುತ್ತುಗಳ ನಡಸಿದವರಾರೋ 1
ನೇಮದಲಿ ಕಲ್ಪಿಸಿದವರಾರೋ
ಪಲ್ಲವೋರಣದಿ ಪವಣಿಸಿದವರಾರೋ
ನಿರ್ಮಿಸಿ ನವದ್ವಾರವನು ತಿದ್ದಿದವರಾರೋ
ಪಾಪಗಳ ಕಾವಲನೆ ಮಾಡಿದವರಾರೋ 2
ನೀಲ ಕುರುಳಿಸಿದವರಾರೋ
ಪಲ್ಲವಿಸಿ ಪಸರಿಸಿದರಾರೋ
ಅಲ್ಲಿ ತೊಟ್ಟಿಲೊಳಿಕ್ಕಿದವರಾರೋ
ಮೈಮರೆತಿಹರು ಮೂಢಜನರು 3
ಪ್ರತಿಬಿಂಬಿಸುತ ಪರಿಪೂರ್ಣನೆನಿಸಲಾರೋ
ನೆಂಬುದಲ್ಲದೆ ಮತ್ತದಾರೋ
ಅಂಬರೀಶನೆ ಸಾಕ್ಷಿಯಲ್ಲದಾರೋ 4
ಪತ್ತು ಬಿಡಸದೇನೋ
ನೀ ಪರೀಕ್ಷಿಸಿದ ಮಾತ್ರದಿಂದೆನ್ನ ಪಾಪಗಳು ಪೋಗವೇನೋ
ಶ್ರೀ ಲಕ್ಷ್ಮೀ ರಮಣಗರಿದೇನೋ 5