ಪಾಹಿ ಶ್ರೀ ನರಸಿಂಹಾ ಪಾವನ್ನ ಮಾಡೆನ್ನಾ ನರಹರಿ ಪ.
ಅತಿಶಯವಾದ ಪಿತನ ಬಾಧೆಗೆ ಸುತ ಪ್ರಹ್ಲಾದ
ಖತಿಯಿಂದ ಕೂಗೆ ದಿತಿಸುತನ ಅಸುನೀಗೆ ಉದಿಸಿದೆಯೊ 1
ಸ್ಥಂಭದಿಂದುದಿಸ್ಯವನ ಡಿಂಭವ ಬಗೆದು
ಅಂಬುಜಾಕ್ಷ ಕರುಳಾ ಹಾರವ ಧರಿಸೇ
ಅಂಬರದೀ ಸುರರೆಲ್ಲಾ ಸ್ತುತಿಗೈಯ್ಯೆ 2
ಕಂದನ ಸಲಹಿದ ತಂದೆ ಶ್ರೀ ಶ್ರೀನಿವಾಸ
ನಿಂದು ನಾ ಪ್ರಾರ್ಥಿಪೆ ಬಂಧನ ಬಿಡಿಸಿ
ಬಂದು ನೀ ಕಾಯೊ ಶ್ರೀ ಹರಿಯೆ 3