ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ ಪೂಜೆ ಮಾಡೋ ಇದ ಹೇಳತೀನಣ್ಣ ಪ ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ ಹಾಸಿಗೇಲಿ ತಿಂಡಿ ತಿನಬಾರ್ದಣ್ಣ ಮೋಸದ ಯೋಚನೆ ಯಿರಬಾರ್ದಣ್ಣ ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1 ನಾಮ ಇಬೂತಿಯ ಅಣೆಗಚ್ರಣ್ಣ ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2 ಮಣ್ಣಿನ ಭೂಮಿಯ ನಂಬದಿರಣ್ಣ ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3 ನೋಡುವ ಕಣ್ಗಳ ಮನದಲಿಡಣ್ಣ ನೋಡದರಲಿ ಹೊಳೆ ಹೊಳೆವಾಬಣ್ಣ 4 ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ ಮದನ ಗೋಪಣ್ಣನು ಕಾಣುವನಣ್ಣ 5 ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ ಹಿಡಿದೆತ್ತಿದ ಕೈಕೊಳಲನು ನೋಡು 6 ಮುಡಿಯ ಕಿರೀಟದ ಹೊಳಪನು ನೋಡು ನಡುಹಣೆಯ ನಿಡು ತಿಲಕವ ನೋಡು ಕಡೆನೋಟದ ಕಣ್ಮಿಂಚನು ನೋಡು 7 ಅಂಬರದಂತೆ ಸರೀರವ ನೋಡು ನಂಬಿಕೆಯಲಿ ಸರಣಾರ್ತಿಯ ಮಾಡು 8 ಬೋಗಾನಂದವ ಪಡಿತೀಯಣ್ಣ ಕೂಗಿಗೆ ಬರುವನು ಮಾಂಗಿರಿಯಣ್ಣ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್