ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ ಬಾಲಬ್ರಹ್ಮಚಾರಿಯಾದ ಕಪಿವರಗೆ ಪ. ಅಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಸಖನಿಗೆ ತುಡುಕಿ ವಜ್ರತನುವಾಗಿ ಸಂಜೀವ ತಂದು ಕಪಿಪುಂಜಗಳ ಸಲಹಿ ಮಂಜುಭಾಷಣ ರಾಮಪಾದ ದಾಸನಿಗೆ 1 ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು ದುಷ್ಟ ಕೀಚಕ ಬಕಾದಿಗಳ ಸಂಹರಿಸಿ ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2 ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3
--------------
ಅಂಬಾಬಾಯಿ
ಲಾಲಿ ಲಾಲೀ ಲಾಲಿ ಮೊದಲಗಟ್ಟೇಶ ಲಾಲಿ ಲಾಲೀ ಲಾಲಿ ತುಂಗಭದ್ರ ತೀರೇಶಾ ಪ. ಆಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಾಕ್ಷ ರಾಮರಂಘ್ರಿಗಳನ್ನು ಸಾರಿ ಮಂಜುಭಾಷಿಣಿಗೆ ಹರಿ ಮುದ್ರಿಕೆಯ ತೋರಿ ಶೌರಿ 1 ಕುರುಕುಲದಿ ಜನಿಸಿದ ಕುಂತೀ ಕುಮಾರ ರಣಧೀರನೆನಿಸಿದ ಕುರುಪ ಸಂಹಾರ ಧರೆಯ ಭಾರವ ಕಳೆದೆ ಗದೆಯಿಂದ ಶೂರ ಧುರಧೀರ ಶ್ರೀ ಕೃಷ್ಣನಂಘ್ರಿ ಪರಿಚಾರ 2 ಅನ್ಯಮತಗಳ ಮುರಿದ ಧನ್ಯಮುನಿವರನೆ ಮಾನ್ಯ ಸುರರಿಂದ ಹರಿಗುನ್ನಂತಪ್ರಿಯನೆ ಭವ ಬನ್ನ ಬಿಡಿಸುವನೆ ಘನ್ನ ಗೋಪಾಲಕೃಷ್ಣವಿಠ್ಠಲನ ಸೂನೆ 3
--------------
ಅಂಬಾಬಾಯಿ
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ಹೊಳೆವೊ ಮಂದಿರವ ಪ. ರಂಗಗೆ ರಚಿಸಿದ ಶೃಂಗಾರದ ವೈಕುಂಠ ಮಂಗಳಾದೇವಿಯರು ಇಳಿಯಲಿ1 ವೀತದೋಷಗೆ ದಿವ್ಯ ಸೇತು ದ್ವೀಪವ ರಚಿಸಿ ಪ್ರೀತಿ ಮಡದಿಯರು ಇಳಿಯಲಿ2 ರನ್ನಮಾಣಿಕದ ಅರಮನೆ ಪನ್ನಿಯರು ಬಂದು ಇಳಿಯಲಿ 3 ಪಟ್ಟೆ ಮುತ್ತುಗಳ ಬಿಗಿದು ಇಟ್ಟಾವ ಕನ್ನಡಿ ಧಿಟ್ಟ ತೋರೋದೆ ಜನಕೆಲ್ಲ ಅಷ್ಟು ಮಡದಿಯರು ಇಳಿಯಲಿ 4 ಹಸಿರು ಪಚ್ಚವ ಬಿಗಿದ ಕುಸುರಾದ ಗಿಳಿಬೋದು ದೇವಕಿ ವಸುದೇವ ಬಂದು ಇಳಿಯಲಿ5 ಜತ್ತು ತೋರುವುದು ಜನಕೆಲ್ಲ ಜತ್ತು ತೋರುವುದು ಜನಕೆಲ್ಲ ಸರಸ್ವತಿ ಮತ್ತೆ ಚತುರ್ಮುಖನು ಇಳಿಯಲಿ 6 ಎದ್ದು ತೋರುವುದು ಜನಕೆಲ್ಲ ಎದ್ದು ತೋರುವುದು ಜನಕೆಲ್ಲ ಪಾರ್ವತಿ ರುದ್ರಾದಿಗಳೆಲ್ಲ ಇಳಿಯಲಿ 7 ಕುಂದಣ ರತ್ನಗಳಿಂದ ಹೊಂದಿ ಕಟ್ಟಿದರಮನೆ ಅಂಬರಕೆ ಮ್ಯಾಲೆ ತುಳುಕುವ ಶಚಿದೇವಿ ಇಂದ್ರಾದಿಗಳೆಲ್ಲ ಇಳಿಯಲಿ 8 ರೇವತಿ ಬಲರಾಮರು ಬಂದು ಇಳಿಯಲಿ9 ಒಂಭತ್ತು ಬಗೆ ರತ್ನ ತಂಬಿ ರಚಿಸಿದ ಮನೆ ಅಂಬರಕೆ ಮೇಲೆ ತುಳುಕುವ ಅಂಬರಕೆ ಮೇಲೆ ತುಳುಕುವರತಿದೇವಿಸಾಂಬ ಪ್ರದ್ಯುಮ್ನರು ಇಳಿಯಲಿ10 ಚಂದ ತೋರುವುದು ಜನಕೆಲ್ಲ ಚಂದ ತೋರುವುದು ಜನಕೆಲ್ಲಭಾನು ಮಾನು ಬಂದ ಜನರೆಲ್ಲ ಇಳಿಯಲಿ 11
--------------
ಗಲಗಲಿಅವ್ವನವರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು